ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡು, ಒಳನಾಡಲ್ಲಿ ಮಳೆಯಾಗುತ್ತಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಜತೆಗೆ ವಾಯವ್ಯ ಭಾಗದಿಂದ ಗಾಳಿ ಬೀಸುತ್ತಿರುವ ಪ್ರಭಾವದಿಂದಾಗಿ ರಾಜ್ಯದಲ್ಲಿ ಮಳೆಯಾಗುತ್ತಿದೆ. ರಾಜ್ಯದಲ್ಲಿ ಮುಂದಿನ ದಿನವು ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ. ಮುಂದಿನ 24 ಗಂಟೆಯಲ್ಲಿ ಒಳನಾಡಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ಇರಲಿದೆ. ಜತೆಗೆ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 55 ಕಿ.ಮೀ ವೇಗದಲ್ಲಿ ಬೀಸಲಿದೆ. ಹೀಗಾಗಿ ಸಮುದ್ರಕ್ಕೆ ಮೀನುಗಾರರು ಇಳಿಯದಂತೆ ಸೂಚಿಸಲಾಗಿದೆ. ಪ್ರವಾಸಿಗರು ಸುರಕ್ಷಿತವಾಗಿ ಇರುವಂತೆ ಎಚ್ಚರಿಸಲಾಗಿದೆ.
ಬೆಂಗಳೂರಲ್ಲಿ ಲಘು ಮಳೆ
ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮುಂಜಾನೆ ಬಿಸಿಲು ಇದ್ದರೆ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ ಅಥವಾ ರಾತ್ರಿಯಂದು ಲಘು ಮಳೆಯ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ನೆಲ ಗಾಳಿಯು ಬೀಸಲಿದೆ.
ಕರಾವಳಿಯಲ್ಲಿ ಚುರುಕಾಗಿರುವ ಮುಂಗಾರು
ನೈರುತ್ಯ ಮುಂಗಾರು ಶುಕ್ರವಾರ ಕರಾವಳಿಯಲ್ಲಿ ಚುರುಕುಗೊಂಡಿತ್ತು. ಉತ್ತರ ಒಳನಾಡಲ್ಲಿ ದುರ್ಬಲಗೊಂಡಿದ್ದರೆ, ದಕ್ಷಿಣ ಒಳನಾಡಲ್ಲಿ ಸಾಮಾನ್ಯವಾಗಿತ್ತು. ಕೋಟ 6 ಹಾಗೂ ಶಿರಾಲಿ, ಕ್ಯಾಸಲ್ ರಾಕ್ ತಲಾ 5 ಸೆಂ.ಮೀ ಮಳೆಯಾಗಿದೆ. ಸುಳ್ಯ, ಭಾಗಮಂಡಲ, ಪೊನ್ನಂಪೇಟೆ ಪಿಡಬ್ಲ್ಯುಡಿ ತಲಾ 4 ಸೆಂ.ಮೀ ಹಾಗೂ ಸಿದ್ದಾಪುರ, ಕುಂದಾಪುರ, ಕೊಲ್ಲೂರು, ಪುತ್ತೂರು, ಕಮ್ಮರಡಿ, ನಾಪೋಕ್ಲು ತಲಾ 3ಸೆಂ.ಮಿ ಮಳೆ ಸುರಿದಿದೆ.
ಅಂಕೋಲಾ, ಗೇರ್ಸೊಪ್ಪ, ಕದ್ರಾ, ಮಾಣಿ, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು, ಕಾರ್ಕಳ, ಕಾರವಾರ, ಖಜೂರಿ ಸೇರಿದಂತೆ ಲಿಂಗನಮಕ್ಕಿ ಎಚ್‌ಎಂಎಸ್ , ಶೃಂಗೇರಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಮಂಚಿಕೆರೆ, ಗೋಕರ್ಣ, ಕುಮಟಾ, ಜೋಯಿಡಾ, ಹೊನಾವರ, ಮಂಗಳೂರು, ಧರ್ಮಸ್ಥಳ ಉಪ್ಪಿನಂಗಡಿ ಸೇರಿದಂತೆ ಲೋಂಡಾ, ಕಮಲಾಪುರ, ಎನ್ ಆರ್ ಪುರ, ಕೊಪ್ಪ, ಜಯಪುರ, ಕೊಟ್ಟಿಗೆಹಾರ, ಮಡಿಕೆರೆ ಸೋಮವಾರಪೇಟೆ, ಸಕಲೇಶಪುರ, ತಾಳಗುಪ್ಪದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…
ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…
ದಿನಾಂಕ 31 ಡಿಸೆಂಬರ್ 2023 ರಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಬೆಳ್ತಂಗಡಿ ತಾಲೂಕಿನ ಉಜಿರೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ…
ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…
ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…