ಚಲನಚಿತ್ರ

ನಟ, ನಿರ್ದೇಶಕ ವಿಕ್ಕಿ ವರುಣ್​ ಕಾನ್ಸೆಪ್ಟ್​ನಲ್ಲಿ ಹೊರಬಂತು ‘ಸೌಂಡ್ಸ್ ಆಫ್ ಕಾಲಾಪತ್ಥರ್’ವೀಡಿಯೊ

Advertisement
Advertisement
Advertisement

ಕಾಲಾಪತ್ಥರ್’ ಸಿನಿಮಾದ ಹಾಡುಗಳ ಝಲಕ್​ ತೋರಿಸುವಂತಹ ಟೀಸರ್​ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ‘ಕೆಂಡ ಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮುಖ್ಯ ಭೂಮಿಕೆಯಲ್ಲೂ ಅವರೇ ನಟಿಸಿದ್ದಾರೆ. ‘ಭುವನ್ ಮೂವೀಸ್’ ಬ್ಯಾನರ್​ನಲ್ಲಿ ಭುವನ್ ಸುರೇಶ್ ಮತ್ತು ನಾಗರಾಜ್ ಬಿಲ್ಲಿನಕೋಟೆ ಅವರು ನಿರ್ಮಿಸಿರುವ ಈ ಸಿನಿಮಾಗೆ ಅನೂಪ್​ ಸೀಳಿನ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಐದು ಹಾಡುಗಳು ಇವೆ. ಯಾವ ಸಾಂಗ್​ ಯಾವ ಫ್ಲೇವರ್​ನಲ್ಲಿ ಇದೆ ಎಂಬುದನ್ನು ತೋರಿಸಲು ಅವುಗಳ ತುಣುಕುಗಳನ್ನು ಸೇರಿಸಿ ‘ಸೌಂಡ್ಸ್​ ಆಫ್​ ಕಾಲಾಪತ್ಥರ್​’ ಎಂಬ ಹೆಸರಿನಲ್ಲಿ ಟೀಸರ್​ ಅನಾವರಣ ಮಾಡಲಾಗಿದೆ. ಈ ವೇಳೆ ಚಿತ್ರದ ಬಗ್ಗೆ ತಂಡದವರು ಮಾತನಾಡಿದ್ದಾರೆ.

ಸಂಗೀತ ನಿರ್ದೇಶಕ ಅನೂಪ್​ ಸೀಳಿನ್​ ಅವರು ಸಿನಿಮಾದ ಆಡಿಯೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಇದರಲ್ಲಿ ಐದು ಹಾಡುಗಳು ಇವೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರಮೋದ್ ಮರವಂತೆ ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್, ಅಭಿಷೇಕ್, ಐಶ್ವರ್ಯಾ ರಂಗರಾಜನ್, ಸಾಯಿ ವಿಘ್ನೇಶ್, ಸಿದ್ದಾರ್ಥ್ ಬೆಳ್ಮಣ್ಣು ಮತ್ತು ಶಿವಾನಿ ಅವರು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈಗ ನಾವು ಬಿಡುಗಡೆ ಮಾಡಿರುವ ಸೌಂಡ್ಸ್ ಆಫ್ ಕಾಲಾಪತ್ಥರ್ ಎಂಬುದು ವಿಕ್ಕಿ ವರುಣ್ ಅವರ ಪರಿಕಲ್ಪನೆ’ ಎಂದು ಅನೂಪ್ ಸೀಳಿನ್ ಹೇಳಿದ್ದಾರೆ.

ನಿರ್ದೇಶಕ ದುನಿಯಾ ಸೂರಿ ಅವರ ಬಳಿ ನಿರ್ದೇಶನದ ಪಾಠಗಳನ್ನು ಕಲಿತು ಬಂದಿರುವ ವಿಕ್ಕಿ ವರುಣ್​ ಅವರು ಈಗ ‘ಕಾಲಾಪತ್ಥರ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘ನಿರ್ದೇಶನ ಎಂಬುದು ನನ್ನ ಡ್ರೀಮ್​. ನನ್ನ ಆ ಕನಸನ್ನು ನನಸು ಮಾಡಿದ ನಿರ್ಮಾಪಕರಿಗೆ ನಾನು ಆಭಾರಿ ಆಗಿದ್ದೇನೆ. ಸೂರಿ ಅವರ ಬಳಿ 10 ವರ್ಷಗಳ ಕಾಲ ಕೆಲಸ ಮಾಡಿದ್ದರಿಂದ ನಿರ್ದೇಶನ ನನಗೆ ಕಷ್ಟ ಆಗಲಿಲ್ಲ. ಡೈರೆಕ್ಷನ್​ ಮತ್ತು ನಟನೆ ಎರಡೂ ಒಟ್ಟಿಗೆ ನಿಭಾಯಿಸುವುದು ಕೊಂಚ ಕಷ್ಟ. ಹಾಗಿದ್ದರೂ ನಮ್ಮ ಟೀಮ್​ನ ಸಹಕಾರದಿಂದ ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ವಿಕ್ಕಿ ವರುಣ್​ ಹೇಳಿದ್ದಾರೆ.

ಏನಾದರೂ ಹೊಸದಾಗಿ ಮಾಡಬೇಕು ಎನಿಸಿದಾಗ ಸೌಂಡ್ಸ್ ಆಫ್ ಕಾಲಾಪತ್ಥರ್ ವೀಡಿಯೊ ಮಾಡುವ ಐಡಿಯಾ ಬಂತು. ಹಾಗಾಗಿ ಇದನ್ನು ಬಿಡುಗಡೆ ಮಾಡಿದ್ದೇವೆ. ‘ಕಾಲಾಪತ್ಥರ್’ ಎಂಬ ಶೀರ್ಷಿಕೆ ಬಗ್ಗೆ ಹೇಳಿದರೆ, ಕಥೆ ಹೇಳಿದಂತೆ ಆಗುತ್ತದೆ. ಸಿನಿಮಾ ನೋಡಿದಾಗ ಅದರ ಬಗ್ಗೆ ತಿಳಿಯುತ್ತದೆ’ ಎಂದು ವಿಕ್ಕಿ ವರುಣ್ ಮಾಹಿತಿ ತಿಳಿಸಿದ್ದಾರೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆ ದಿನಾಂಕ ತಿಳಿಸುವುದಾಗಿ ನಿರ್ಮಾಪಕರಾದ ಭುವನ್ ಸುರೇಶ್, ನಾಗರಾಜ್ ಬಿಲ್ಲಿನಕೋಟೆ ಹೇಳಿದ್ದಾರೆ. ಡಾ. ರಾಜ್​ ಕುಟುಂಬದ ನಟಿ ಧನ್ಯಾ ರಾಮ್​ಕುಮಾರ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿ ಅವರು ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗಂಗಾ ಎಂಬ ಹೆಸರಿನ ಶಿಕ್ಷಕಿಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

2 years ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

2 years ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

2 years ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

2 years ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

2 years ago