G20 ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆ ಸಭೆಯಾಗಿ ಹೊರಹೊಮ್ಮಿದ ಭಾರತದ ಅಧ್ಯಕ್ಷತೆ!

0
98

ನವದೆಹಲಿ: ಜಿ20 ಶೃಂಗಸಭೆಗೆ ಅಧ್ಯಕ್ಷತೆ ವಹಿಸಿರುವ ಭಾರತ ಇದೀಗ ದೆಹಲಿಯಲ್ಲಿ ಎರಡು ದಿನಗಳ ಮಹತ್ವದ ಸಮ್ಮೇಳನದಲ್ಲಿ ಹಲವು ರಾಷ್ಟ್ರಗಳ ಗಣ್ಯರೊಂದಿಗೆ ದ್ವಿಪಕ್ಷೀಯ ಮಾತುಕತೆ, ಜಾಗತಿಕ ಸಭೆ ನಡೆಸುತ್ತಿದೆ. ಇದರ ಜೊತಗೆ ಭಾರತದ ಜಿ20 ಶೃಂಗ ಸಭೆ ಹೊಸ ಮೈಲಿಗಲ್ಲು ನಿರ್ಮಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ 73 ಘೋಷಣೆಗಳು ಹೊರಬಿದ್ದಿದೆ. ಇಷ್ಟೇ ಅಲ್ಲ ಈ 73 ಘೋಷಣೆಗಳನ್ನು ವಿಶ್ವನಾಯಕರು ಅಂಗೀಕರಿಸಿದ್ದಾರೆ. ಈ ತನ ಯಾವುದೇ ಜಿ20 ಸಭೆಯಲ್ಲಿ ಇಷ್ಟು ಘೋಷಣೆಗಳಿಗೆ ಅಂಗೀಕಾರ ಸಿಕ್ಕಿಲ್ಲ. ಇದರ ಜೊತೆಗೆ 39 ದಾಖಲೆಗಳನ್ನು ಲಗತ್ತಿಸಿ ಪ್ರಸ್ತುತಪಡಿಸಲಾಗಿದೆ. ಈ ದಾಖಲೆಗಳು ಮಾನ್ಯವಾಗಿದೆ.

ಭಾರತದ ಅದ್ಯಕ್ಷತೆ ವಹಿಸಿರುವ ಜಿ20 ಶೃಂಗಸಭೆಯಲ್ಲಿ 73 ಘೋಷಣೆಗಳ ಅಂಗೀಕಾರ ಹಾಗೂ 39 ದಾಖಲೆಗಳ ಪ್ರಸ್ತುತಿ ಸೇರಿದಂತೆ ಒಟ್ಟು 112 ಮಹತ್ವದ ಘೋಷಣೆಗಳು ದಾಖಲೆಗಳು ಅಂಗೀಕಾರವಾಗಿದೆ. ಈ ಮೂಲಕ ಈ ಹಿಂದಿನ ಜಿ20 ಅಧ್ಯಕ್ಷತೆ ಹಾಗೂ ಸಮ್ಮೇಳನಕ್ಕೆ ಹೋಲಿಸಿದರೆ ಅತ್ಯಂತ ಗರಿಷ್ಠ ಅನ್ನೋ ಹೆಗ್ಗಳಿಕಗೆ ಪಾತ್ರವಾಗಿದೆ.

2022ರಲ್ಲಿ ಇಂಡೋನೇಷಿಯಾ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿತ್ತು. ಈ ವೇಳೆ 27 ಘೋಷಣೆಗಳಿಗೆ ಅಂಗೀಕಾರ ಸಿಕ್ಕಿದೆ. ಇನ್ನು 23 ದಾಖಲೆಗಳನ್ನು ಪ್ರಸ್ತುತ ಪಡಿಸಲಾಗಿತ್ತು. ಒಟ್ಟು ಸಂಖ್ಯೆ 50. 2021ರಲ್ಲಿ ಇಟಲಿ ಜಿ20 ಶೃಂಗಸಭೆ ಅಧ್ಯಕ್ಷತೆ ವಹಿಸಿತ್ತು. ಈ ವೇಳೆ ಮಹಾಸಮ್ಮೇಳನದಲ್ಲಿ 36 ಘೋಷಣೆಗಳಿಗೆ ವಿಶ್ವನಾಯಕರು ಅಂಗೀಕಾರ ಪಡೆದಿದ್ದರು. 29 ದಾಖಲೆಗಳು ಸಲ್ಲಿಕೆ ಸೇರಿದಂತೆ ಒಟ್ಟು 65 ಘೋಷಣೆ ಹಾಗೂ ದಾಖಲೆ ಅಂಗೀಕಾರವಾಗಿತ್ತು. ಜಿ20 ಇತಿಹಾಸದಲ್ಲಿ ಎರಡನೇ ಅತೀ ದೊಡ್ಡ ಘೋಷಣೆ ಅಂಗೀಕಾರ ಹಾಗೂ ದಾಖಲೆ ಸಲ್ಲಿಕೆಗೆ ಇಂಡೋನೇಷಿಯಾ ಜಿ20 ಪಾತ್ರವಾಗಿದೆ.

2019ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಜಿ20 ಅಧ್ಯಕ್ಷತೆಯಲ್ಲಿ ಒಟ್ಟು 30, 2019ರಲ್ಲಿ ಜಪಾನ್ ಅಧ್ಯಕ್ಷತೆ ವಹಿಸಿದ್ದ ಜಿ20 ಅಧ್ಯಕ್ಷತೆಯಲ್ಲಿ ಒಟ್ಟು 29,2018ರಲ್ಲಿ ಅರ್ಜಂಟೀನಾ 33, ಇನ್ನು 2017ರಲ್ಲಿ ಜರ್ಮನಿಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಒಟ್ಟು 22 ಘೋಷಣೆ ಹಾಗೂ ದಾಖಲೆ ಅಂಗೀಕಾರವಾಗಿತ್ತು.

LEAVE A REPLY

Please enter your comment!
Please enter your name here