ಮಕ್ಕಳಿಗೆ ಸುಲಭವಾಗಿ ಊಟ ಮಾಡಿಸುವುದು ಹೇಗೆ?; ಇಲ್ಲಿವೆ 10 ಸಲಹೆಗಳು

By: Ommnews

Date:

Share post:

ಸಂಸ್ಕರಿತ ಆಹಾರಗಳು ಮತ್ತು ತಿಂಡಿಗಳು ರೂಢಿಯಾಗುತ್ತಿರುವ ಯುಗದಲ್ಲಿ ಪೋಷಕರು ಆರೋಗ್ಯಕರ ಆಹಾರ ಪದ್ಧತಿಯನ್ನು ಹೇಗೆ ಅಭ್ಯಾಸ ಮಾಡಿಸುತ್ತಾರೆ? ಮನೆಯಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಮಕ್ಕಳಲ್ಲಿ ಹೇಗೆ ಆಸಕ್ತಿ ಮೂಡಿಸುತ್ತಾರೆ? ಎಂಬುದು ಮುಖ್ಯ ಸಂಗತಿ.

Advertisement
Advertisement
Advertisement

ಮಕ್ಕಳು ತನ್ನ ತಂದೆ-ತಾಯಿಯರನ್ನು ನೋಡಿಯೇ ಬಹುತೇಕ ವಿಷಯಗಳನ್ನು ಕಲಿಯುತ್ತದೆ. ಹೀಗಾಗಿ, ನಿಮ್ಮ ಮಕ್ಕಳೆದುರು ನೀವು ಯಾವ ರೀತಿ ಇರುತ್ತೀರೋ ನಿಮ್ಮ ಮಗುವೂ ಅದೇ ರೀತಿ ಬೆಳೆಯುತ್ತದೆ. ಹೀಗಾಗಿ, ನಿಮ್ಮ ಮಗುವಿಗೆ ಯಾವ ರೀತಿಯ ಶಿಸ್ತು ಕಲಿಸಬೇಕೆಂದು ಕೊಳ್ಳುತ್ತೀರೋ ಅದನ್ನು ಮೊದಲು ನೀವು ಅಳವಡಿಸಿಕೊಳ್ಳಿ. ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಸ್ಥಾಪಿಸುವುದು ಪೋಷಕರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಆದರೆ, ಬಹುತೇಕ ಮಕ್ಕಳು ತಿನ್ನಲು ಅಥವಾ ಊಟ ಮಾಡಲು ಅಪ್ಪ-ಅಮ್ಮನನ್ನು ಸಾಕಷ್ಟು ಸತಾಯಿಸುತ್ತಾರೆ.

ಸಂಸ್ಕರಿತ ಆಹಾರಗಳು ಮತ್ತು ತಿಂಡಿಗಳು ರೂಢಿಯಾಗುತ್ತಿರುವ ಯುಗದಲ್ಲಿ ಪೋಷಕರು ಆರೋಗ್ಯಕರ ಆಹಾರ ಪದ್ಧತಿಯನ್ನು ಹೇಗೆ ಅಭ್ಯಾಸ ಮಾಡಿಸುತ್ತಾರೆ? ಮನೆಯಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಮಕ್ಕಳಲ್ಲಿ ಹೇಗೆ ಆಸಕ್ತಿ ಮೂಡಿಸುತ್ತಾರೆ? ಎಂಬುದು ಮುಖ್ಯ ಸಂಗತಿ. ಮಕ್ಕಳ ತಜ್ಞ ಡಾ. ಪೌಲಾ ಗೋಯೆಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ

ಮಕ್ಕಳು ಸರಿಯಾಗಿ ತಿನ್ನುವಂತೆ ಮಾಡಲು 10 ಸಲಹೆಗಳು ಇಲ್ಲಿವೆ.

1. ಚಿಕ್ಕ ವಯಸ್ಸಿನಿಂದಲೇ ನಿಮ್ಮ ಮಗುವಿಗೆ ವಿವಿಧ ಆಹಾರಗಳನ್ನು ಪರಿಚಯಿಸಿ. ಶಿಶುಗಳು 6ರಿಂದ 12 ತಿಂಗಳ ನಡುವೆ ಹೊಸ ರುಚಿಗಳನ್ನು ನೋಡಲು ಹೆಚ್ಚು ಇಷ್ಟಪಡುತ್ತಾರೆ. ತಾಳ್ಮೆಯಿಂದ ವಿವಿಧ ಆಹಾರಗಳನ್ನು ನೀಡುವುದನ್ನು ಮುಂದುವರಿಸಿ. ಇದರಿಂದ ಮಕ್ಕಳು ಅದಕ್ಕೆ ಹೊಂದಿಕೊಳ್ಳುತ್ತವೆ.

2. ಮಕ್ಕಳು ತಮ್ಮ ಪೋಷಕರನ್ನು ಅನುಸರಿಸುತ್ತಾರೆ. ನೀವು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಇಷ್ಟಪಟ್ಟು ತಿಂದರೆ ಮಕ್ಕಳು ಕೂಡ ಅದನ್ನು ಇಷ್ಟಪಡುವ ಸಾಧ್ಯತೆ ಹೆಚ್ಚು.

3. ನಿಮ್ಮ ಮಕ್ಕಳನ್ನು ದಿನಸಿ ಶಾಪಿಂಗ್‌ಗೆ ಕರೆದುಕೊಂಡು ಹೋಗಿ. ಅವರೊಂದಿಗೆ ಹೊಸ ತರಕಾರಿ ಅಥವಾ ಹಣ್ಣನ್ನು ಆಯ್ಕೆ ಮಾಡಿಕೊಳ್ಳಿ. ಅಡುಗೆಮನೆಯಲ್ಲಿ ಸಹಾಯ ಮಾಡಲು ಅವರನ್ನು ಪ್ರೋತ್ಸಾಹಿಸಿ. ಇದರಿಂದ ಊಟದಲ್ಲಿ ಅವರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

4. ಮನೆಯಲ್ಲಿ ಜಂಕ್ ಫುಡ್ ತಿನ್ನುವುದನ್ನು ಕಡಿಮೆ ಮಾಡಿ. ತಾಜಾ ಹಣ್ಣುಗಳು, ಬೀಜಗಳು, ಡ್ರೈ ಫ್ರೂಟ್​ಗಳನ್ನು ಮನೆಯಲ್ಲಿ ತಿಂಡಿಗಳಾಗಿ ಇರಿಸಿ.

5. ಊಟ ಮಾಡದಿದ್ದರೆ ಮಕ್ಕಳಿಗೆ ಬೈಯುವುದು, ಹೊಡೆಯುವುದು ಮಾಡಬೇಡಿ. ಇದರಿಂದ ಬೆಳೆಯುತ್ತಾ ಆ ಮಕ್ಕಳಿಗೆ ಆಹಾರದ ಮೇಲೆ ತಿರಸ್ಕಾರ ಮೂಡಬಹುದು.

6. ಊಟ ಮತ್ತು ತಿಂಡಿಗಳಿಗೆ ನಿಗದಿತ ಸಮಯವನ್ನು ಮಾಡಿಕೊಳ್ಳಿ. ಇದು ನಿಮ್ಮ ಮಗುವಿಗೆ ದಿನವಿಡೀ ಪೌಷ್ಟಿಕಾಂಶವನ್ನು ನೀಡಲು ಸಹಾಯ ಮಾಡುತ್ತದೆ. ಹಾಗೇ, ಚಾಕೋಲೇಟ್, ಬಿಸ್ಕತ್, ಚಿಪ್ಸ್​ ಬದಲು ಹಣ್ಣು, ಜ್ಯೂಸ್ ನೀಡಿ.

7. ಬಣ್ಣ ಬಣ್ಣದ ತರಕಾರಿ, ಹಣ್ಣುಗಳನ್ನು ಪ್ಲೇಟ್​ನಲ್ಲಿ ಜೋಡಿಸಿ, ಮಕ್ಕಳು ಇಷ್ಟಪಟ್ಟು ತಿನ್ನುವಂತೆ ಅವರನ್ನು ಉತ್ತೇಜಿಸಿ.

8. ಮಕ್ಕಳಿಗೆ ತಮ್ಮ ದೇಹಕ್ಕೆ ಎಷ್ಟು ಆಹಾರ ಬೇಕೆಂಬುದನ್ನು ಕಲಿಸಿ. ಅವರ ಹೊಟ್ಟೆ ತುಂಬಿದಾಗ ತಿನ್ನುವುದನ್ನು ನಿಲ್ಲಿಸಲು ಕಲಿಸಿ. ನಿಜವಾಗಿಯೂ ಹಸಿದಿರುವಾಗ ಮಾತ್ರ ತಿನ್ನಬೇಕು ಎಂದು ಅವರಿಗೆ ತಿಳಿಸಿ.

9. ಆಯಾ ವಯಸ್ಸಿಗೆ ಸೂಕ್ತವಾದ ರೀತಿಯಲ್ಲಿ, ವಿಭಿನ್ನ ಆಹಾರಗಳು ಅವರಿಗೆ ಹೇಗೆ ಸಹಾಯ ಮಾಡುತ್ತವೆ ಎಂಬುದರ ಕುರಿತು ನಿಮ್ಮ ಮಗುವಿನ ಜೊತೆ ಮಾತನಾಡಿ. ಉದಾಹರಣೆಗೆ, ಕ್ಯಾರೆಟ್ ನಿಮ್ಮ ಕಣ್ಣುಗಳಿಗೆ ಒಳ್ಳೆಯದು, ಹಾಲು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ ಎಂದೆಲ್ಲ ಅವರಿಗೆ ಹೇಳಿ ತಿನ್ನಿಸಿ.

10. ಮಕ್ಕಳ ರುಚಿ ಮೊಗ್ಗುಗಳು ನಿರಂತರವಾಗಿ ವಿಕಸನಗೊಳ್ಳುತ್ತವೆ. ಅವರು ಇಂದು ಆಹಾರವನ್ನು ತಿರಸ್ಕರಿಸಬಹುದು ಮತ್ತು ಕೆಲವು ತಿಂಗಳ ನಂತರ ಅದನ್ನು ಪ್ರೀತಿಸಬಹುದು. ಅವರು ನಿಜವಾಗಿಯೂ ಇಷ್ಟಪಡುವುದಿಲ್ಲ ಎಂದು ನಿರ್ಧರಿಸುವ ಮೊದಲು ಅವರು ತಿರಸ್ಕರಿಸಿದ ಆಹಾರವನ್ನು ಹಲವು ಬಾರಿ ನೀಡಿ. ಕ್ರಮೇಣ ನಿಮ್ಮ ಮಗು ಎಲ್ಲವನ್ನೂ ಇಷ್ಟಪಟ್ಟು ತಿನ್ನಲು ಆರಂಭಿಸುತ್ತದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section