ಯೂಟ್ಯೂಬ್ ನೋಡಿ ಎಲೆಕ್ಟ್ರಿಕ್ ಬೈಕ್ ರೆಡಿ ಮಾಡಿದ ಯುವಕ! ಅದರ ಮೈಲೇಜ್ ನೋಡಿದ್ರೆ ಬೆಚ್ಚಿಬೀಳ್ತೀರಾ!

By: Ommnews

Date:

Share post:

ದಿಲೀಪ್ ಕಡಿಮೆ ಬೆಲೆಯಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬೈಕ್ ತಯಾರಿಸಬೇಕು ಎಂದು ನಿಶ್ಚಯಿಸಿದ. ನಿರೀಕ್ಷೆಯಂತೆ ಯೂಟ್ಯೂಬ್ ನಲ್ಲಿ ಎಲೆಕ್ಟ್ರಿಕ್ ಬೈಕ್ ಮಾಡುವುದು ಹೇಗೆ ಎಂದು ನೋಡಿಕೊಂಡ. ಹಳೆಯ ಬೈಕ್ ಅನ್ನು ಸ್ಕ್ರ್ಯಾಪ್‌ನಲ್ಲಿ ಖರೀದಿಸಿ, ಆನ್‌ಲೈನ್‌ನಲ್ಲಿ ಬ್ಯಾಟರಿಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿ ಅದನ್ನು ಅಳವಡಿಸಿ ಎಲೆಕ್ಟ್ರಿಕ್ ಬೈಕ್ ತಯಾರಿಸಿದ.

Advertisement
Advertisement
Advertisement

ಶ್ರಮಪಟ್ಟರೆ ಜನ ಶ್ರೀಮಂತರಾಗುತ್ತಾರೆ. ಸಿಕ್ಕ ಸಣ್ಣಪುಟ್ಟ ಅವಕಾಶಗಳಲ್ಲೇ ತಮ್ಮ ಪ್ರತಿಭೆಗೆ, ತಂತ್ರಜ್ಞಾನ ಸೇರಿಸಿ ಅದ್ಭುತ ಆವಿಷ್ಕಾರ ಮಾಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ ಈ ಯುವಕ. ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಭಾರ ಹೊರಲಾರದ ಗ್ರಾಮೀಣ ಭಾಗದ ಜನರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಈ ಮಧ್ಯೆ ಇದೇ ಉದ್ದೇಶದಿಂದ ವಿದ್ಯಾರ್ಥಿಯೊಬ್ಬ (Student) ಎಲೆಕ್ಟ್ರಿಕ್ ಬೈಕ್ (electric bike) ತಯಾರಿಸಲು ಬಯಸಿದ್ದಾನೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 60 ರಿಂದ 70 ಕಿಲೋ ಮೀಟರ್ ಓಡುವ ಬೈಕ್ ತಯಾರಿಸಿದ್ದಾನೆ. ವಿವರಗಳನ್ನು ನೋಡುವುದಾದರೆ ಏಲೂರು ಜಿಲ್ಲೆಯ ದ್ವಾರಕಾ ತಿರುಮಲ ಮಂಡಲದ ಕೊಮ್ಮಾರ ಗ್ರಾಮದವರಾದ ಮಂದಾ ದಿಲೀಪ್ ಕುಮಾರ್ ದುಭಚರ್ಲದ ಖಾಸಗಿ ಕಾಲೇಜಿನಲ್ಲಿ ಇಂಟರ್ ಮುಗಿಸಿದ್ದಾನೆ. ದ್ವಾರಕಾತಿರುಮಲ ಸಂಸ್ಕೃತೋನ್ನತ ಶಾಲೆಯಲ್ಲಿ 10ನೇ ತರಗತಿವರೆಗೆ ಓದಿದ್ದಾನೆ.

ದಿಲೀಪ್‌ಗೆ ಯಾಂತ್ರಿಕ ವಸ್ತುಗಳೆಂದರೆ ಹೆಚ್ಚು ಇಷ್ಟ. ಹಾಗಾಗಿ ಶಾಲಾ ದಿನಗಳಲ್ಲೇ ವಿಜ್ಞಾನ ಮೇಳಗಳಲ್ಲಿ ಹಲವು ಆವಿಷ್ಕಾರಗಳನ್ನು ಮಾಡಿದ್ದಾನೆ. ಅವಗಳಿಗೆ ಪ್ರಶಸ್ತಿಗಳನ್ನೂ ಪಡೆದಿದ್ದ. ಆದರೆ ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿರುವುದರಿಂದ ಸಾಮಾನ್ಯ ಜನರು ಬೈಕ್ ಬಳಸುವುದೇ ಕಷ್ಟವಾಗಿದೆ ಎಂದು ಭಾವಿಸಿದ ದಿಲೀಪ್ ಕುಮಾರ್, ಕಡಿಮೆ ಬೆಲೆಯಲ್ಲಿ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬೈಕ್ ತಯಾರಿಸಬೇಕು ಎಂದು ನಿಶ್ಚಯಿಸಿದ.

ನಿರೀಕ್ಷೆಯಂತೆ ಯೂಟ್ಯೂಬ್ ನಲ್ಲಿ ಎಲೆಕ್ಟ್ರಿಕ್ ಬೈಕ್ ಮಾಡುವುದು ಹೇಗೆ ಎಂದು ನೋಡಿಕೊಂಡ. ಅದಕ್ಕೆ ಯಾವೆಲ್ಲಾ ಸಲಕರಣೆ ಬೇಕು ಎಂಬುದನ್ನು ಪಟ್ಟಿ ಮಾಡಿಕೊಂಡ. ಹಳೆಯ ಬೈಕ್ ಅನ್ನು ಸ್ಕ್ರ್ಯಾಪ್‌ನಲ್ಲಿ ಖರೀದಿಸಿ, ಆನ್‌ಲೈನ್‌ನಲ್ಲಿ ಬ್ಯಾಟರಿಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿ ಅದನ್ನು ಅಳವಡಿಸಿ ಎಲೆಕ್ಟ್ರಿಕ್ ಬೈಕ್ ತಯಾರಿಸಿದ. ಹೀಗೆ ತಯಾರಿಸಿರುವ ಎಲೆಕ್ಟ್ರಿಕ್ ಬೈಕ್ ಅನ್ನು ನಾಲ್ಕು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸುಮಾರು 60 ರಿಂದ 70 ಕಿಲೋಮೀಟರ್ ಪ್ರಯಾಣಿಸಬಲ್ಲದು.

ಅಂದಹಾಗೆ ಆ ಎಲೆಕ್ಟ್ರಿಕ್ ಬೈಕ್ ತಯಾರಿಸಲು ದಿಲೀಪ್ ಕುಮಾರ್ ಮಾಡಿದ ವೆಚ್ಚ ಕೇವಲ 17 ಸಾವಿರ ರೂಪಾಯಿ. ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ದಿಲೀಪ್ ಕುಮಾರನನ್ನು ಗ್ರಾಮಸ್ಥರು ಶ್ಲಾಘಿಸುತ್ತಿದ್ದಾರೆ. ದಿಲೀಪ್ ತಯಾರಿಸಿರುವ ಎಲೆಕ್ಟ್ರಿಕ್ ಬೈಕ್‌ನಲ್ಲಿ ಮೂವರು ಸುಲಭವಾಗಿ ಪ್ರಯಾಣಿಸಬಹುದಾಗಿದ್ದು, ಚಿಕ್ಕ ಕುಟುಂಬಕ್ಕೆ ಈ ಬೈಕ್ ತುಂಬಾ ಉಪಯುಕ್ತವಾಗಿದೆ ಎನ್ನುತ್ತಾರೆ ದಿಲೀಪ್ ಕುಮಾರ್. ತಾನು ಎಲ್ಲಿಗೆ ಹೋದರೂ ಆ ಬೈಕ್‌ನಲ್ಲಿ ಹೋಗುತ್ತೇನೆ, ಈ ಬೈಕ್ ಮುಂದಿನಿಂದ ಅಷ್ಟೇ ಅಲ್ಲ; ಹಿಮ್ಮುಖವಾಗಿಯೂ ಸಂಚರಿಸುತ್ತದೆ ಎನ್ನುತ್ತಾರೆ ದಿಲೀಪ್ ಕುಮಾರ್. ಸರ್ಕಾರ ಇವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಇಂತಹ ಹಲವು ಆವಿಷ್ಕಾರಗಳನ್ನು ಮಾಡಬಹುದು ಎಂಬ ಭರವಸೆ ದಿಲೀಪ್ ಕುಮಾರ್ ಅವರದ್ದು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section