ಲೇಖನಗಳು

ಸೆಪ್ಟೆಂಬರ್ 5 : ಇಂದು ನಮ್ಮೆಲ್ಲರ ನೆಚ್ಚಿನ ಶಿಕ್ಷಕರನ್ನು ನೆನೆಯುವ ಶುಭ ದಿನ

ಹಸಿ ಮಣ್ಣಿನಂತಿರುವ ಮಗುವಿನ ಮನಸ್ಸನ್ನು ಎರಡೂ ಕೈಗಳಿಂದ ಪ್ರೀತಿಯಿಂದ ತಟ್ಟಿ, ಸುಂದರವಾಗಿ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ನಮಗೆ ಗುರಿ ಮುಟ್ಟಲು ದಾರಿ ತೋರುವ, ಸದಾ ಕಾಲವೂ ಸಮಸ್ಯೆಗೆ ಸಮರ್ಪಕ ಪರಿಹಾರ ನೀಡುತ್ತಾ, ನಿಸ್ವಾರ್ಥ ಮನೋಭಾವದಿಂದ ದಾರಿದೀಪ ತೋರುವವ ಶಿಕ್ಷಕ.

Advertisement
Advertisement
Advertisement

ಶಿಕ್ಷಣ ಮತ್ತು ಶಿಕ್ಷಕರು ದೇಶದ ಅತ್ಯಂತ ಅಮೂಲ್ಯವಾದ ಆಸ್ತಿಗಳು. ಭಾರತವು ನಿರಂತರವಾಗಿ ಶಿಕ್ಷಣ ಮತ್ತು ಗುರುಗಳನ್ನು ವಿಶೇಷ ಗೌರವದಿಂದ ಕಾಣುತ್ತಿದೆ, ಮತ್ತು ಶ್ರೇಷ್ಠ ಗುರು ಪರಂಪರೆಯನ್ನು ಹೊಂದಿದೆ. ಜೀವನದಲ್ಲಿ ಗುರು-ಗುರಿಯಿರಬೇಕು ಎಂಬ ಮಾತನ್ನು ಕೇಳಿರಬಹುದು. ಗುರಿಯ ಬೃಹಾದಾಕಾರವು ಸಾಧಿಸಲು ಗುರುವಿನ ಮಾರ್ಗದರ್ಶನದಿಂದ ಗುಲಗುಂಜಿಯಾಗುವುದೇ. ಗುರು ಎಲ್ಲವನ್ನೂ ಹೇಳಿಕೊಡುವ ವ್ಯಕ್ತಿ. ನಾವು ಸಾಧ್ಯವಾದರೆ ಸಬಲವನ್ನೂ ಕಲಿಸಲು ತಯಾರಿರುವ ವ್ಯಕ್ತಿ ಹಾಗೂ ಮಾರ್ಗವನ್ನು ಬೆಳಗಿಸುವ ದೀಪದಂತೆ ಗುರುಗಳು ನಮ್ಮನ್ನು ಯಶಸ್ಸಿನತ್ತ ಕರೆದೊಯ್ಯುತ್ತಾರೆ. ನಾವು ಅನುಸರಿಸುವ ಮೊದಲ ವ್ಯಕ್ತಿಯೂ ಗುರು.

ಯಾವುದೇ ಮಹಾನ್‌ ವ್ಯಕ್ತಿಗಳ ಕತೆಗಳನ್ನು ಓದಿದಾಗ ಆ ಕಾಲದಲ್ಲಿ ಗುರುಗಳ ಮಹತ್ವ ಮತ್ತು ಅವರ ಮಾರ್ಗದರ್ಶನದಲ್ಲಿ ತಯಾರಾದ ಯಶಸ್ಸಿನ ಕಥೆಗಳು ಅನೇಕ. ಶಿವಾಜಿ ಮಹಾರಾಜನು ಆತ್ಮಸ್ಥೆರ್ಯವನ್ನು ಕಳೆದು ಕೊಂಡು ಕುಳಿತಿದ್ದಾಗ ಗುರು ರಾಮದಾಸರು ತುಂಬಿದ ಆತ್ಮವಿಶ್ವಾಸದಿಂದ ಮತ್ತೆ ಸಾಮ್ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಮಹಾಭಾರತದಲ್ಲಿ ಅರ್ಜುನ ಉತ್ತಮ ಬಿಲ್ವಿದ್ಯಾ ಪ್ರವೀಣನಾಗಲು ದ್ರೋಣಾಚಾರ್ಯರಂತಹ ಗುರುಗಳೇ ಕಾರಣ. ಇಂತಹ ವ್ಯಕ್ತಿಗಳು ಗುರು ಬೋಧನೆಯಿಂದಲೇ ಇಂದಿನ ಸಮಾಜಕ್ಕೆ ಸ್ಪೂರ್ತಿ ಚಿಲುಮೆಯಾಗಿರುವರು.

ಪ್ರಪಂಚದಾದ್ಯಂತ ಶಿಕ್ಷಕರು ಜ್ಞಾನ ಮತ್ತು ಮಾರ್ಗದರ್ಶನವನ್ನು ನೀಡುವ ಪಾತ್ರವನ್ನು ವಹಿಸುತ್ತಾರೆ. ಬೋಧನೆ ಜಾಗತಿಕವಾಗಿ ನಡೆಯುತ್ತಿದ್ದರೂ, ಭಾರತೀಯ ಮಣ್ಣು ವಿಶೇಷವಾಗಿ ಶಿಕ್ಷಕರಿಗೆ ವಿಶಿಷ್ಟ ಗೌರವವನ್ನು ನೀಡುತ್ತಾ ಬಂದಿವೆ. ವಿಶ್ವಾದ್ಯಂತ ಅಕ್ಟೋಬರ್‌ 5 ರಂದು ಶಿಕ್ಷಕರ ದಿನವನ್ನು ಆಚರಿಸಿದರೆ, ಭಾರತದಲ್ಲಿ ಇದು ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವಾದ ಸಪ್ಟೆಂಬರ್‌ 5 ರಂದು ಆಚರಿಸಲಾಗುತ್ತದೆ. ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ ಎನ್ನುವುದು ವಿಶ್ವ ಶಿಕ್ಷಕರ ದಿನ 2023ರ ಥೀಮ್‌. ಗುರುಗಳನ್ನು ಪೂಜಿಸುವ ಈ ಸಂಪ್ರದಾಯವು ನಮ್ಮ ದೇಶದಲ್ಲಿ ಯುಗಾಂತರಗಳಿಂದ ಮುಂದುವರೆದಿದ್ದರೂ, ಪ್ರಸ್ತುತ ರಾಜಕೀಯ ಮತ್ತು ತಂತ್ರಜ್ಞಾನದ ಪ್ರಾಬಲ್ಯದ ಇಂದಿನ ಆಧುನಿಕ ಯುಗದಲ್ಲಿ, ಸಮಾಜಕ್ಕೆ ಶಿಕ್ಷಕರ ಕೊಡುಗೆಗಳನ್ನು ಒತ್ತಿಹೇಳುವುದು ನಿರ್ಣಾಯಕವಾಗಿವೆ.

ಶಿಕ್ಷಣವು ನಿಸ್ಸಂದೇಹವಾಗಿ ಒಂದು ಅಪಾರ ಮೌಲ್ಯವನ್ನು ಹೊಂದಿರುವ ಸವಲತ್ತು. ಇಂದಿನ ಶಿಕ್ಷಣ ವ್ಯವಸ್ಥೆಯು ಕೌಶಲಯುತ ಜೀವನದುದ್ದಕ್ಕೂ ಆಧಾರವಾಗಬಲ್ಲ ಶಿಕ್ಷಣವನ್ನು ನೀಡುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಪ್ರಶ್ನಾತೀತವಾಗಿ ಉಳಿದಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ಹೆಚ್ಚಾಗಿ ಶ್ರೇಯಾಂಕದ ಹಾಗೂ ಲಾಭದ ಮೇಲೆ ಮಾತ್ರ ಕೇಂದ್ರೀಕರಿಸುತ್ತಿದೆ. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಹೆಚ್ಚಿನ ಅಂಕಗಳನ್ನು ಗಳಿಸಲು ಮತ್ತು ಕೆಲವು ಉನ್ನತ ಕಂಪೆನಿಗಳಲ್ಲಿ ಅಥವಾ ಸಾಮಾಜಿಕ ರಚನೆಗಳಲ್ಲಿ ಉದ್ಯೋಗಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಹಗಲು ರಾತ್ರಿ ಸಿದ್ಧಪಡಿಸುತ್ತಿದೆ.

ಉತ್ತಮ ಶಿಕ್ಷಣ ಮಾತ್ರವಲ್ಲ, ಸಂಸ್ಕಾರ, ದೇಶಭಕ್ತಿ, ಹಿರಿಯರು ಮತ್ತು ಮಾರ್ಗದರ್ಶಕರಿಗೆ ಗೌರವ ಮತ್ತು ಪೋಷಕರ ಮೇಲಿನ ವಾತ್ಸಲ್ಯದಂತಹ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ- ಇವು ನಮ್ಮ ರಾಷ್ಟ್ರದ ಭವಿಷ್ಯದ ಮೂಲಾಧಾರಗಳಾಗಿವೆ. ವಿಜ್ಞಾನ, ಕ್ರೀಡೆ ಮತ್ತು ಜ್ಞಾನದ ಕ್ಷೇತ್ರಗಳಲ್ಲಿ ಭಾರತದ ಯುವಕರನ್ನು ಪೋಷಿಸುವ ಜವಾಬ್ದಾರಿಯನ್ನು ಶಿಕ್ಷಕರು ಹೊರುತ್ತಾರೆ. ಅಂತೆಯೇ ಶಿಕ್ಷಕರು ಮತ್ತು ಶಾಲೆಗಳಿಗೆ ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಕರ್ತವ್ಯವು ಸರಕಾರದ್ದೆ. ಹಾಗೆಯೇ, ಪೋಷಕರು ತಮ್ಮ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಮೆಚ್ಚುಗೆ ಮತ್ತು ಪ್ರೀತಿಯನ್ನು ಬೆಳೆಸುವಲ್ಲಿ ಅನಿವಾರ್ಯ ಪಾತ್ರ ವಹಿಸಲೇಬೇಕು.

ಪ್ರಸ್ತುತ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ನೆಚ್ಚಿನ ಶಿಕ್ಷಕರ ಪ್ರೀತಿಯ ನೆನಪುಗಳಿರುತ್ತವೆ, ಅವರ ಪಾಠಗಳು ಮತ್ತು ಜೀವನವು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಸಪ್ಟೆಂಬರ್‌ 5ರ ಶಿಕ್ಷಕರ ದಿನದಂದು ನಮಗೆ ಮಾರ್ಗದರ್ಶನ ನೀಡಿದ, ಪ್ರೇರೇಪಿಸಿದ ಮತ್ತು ಉನ್ನತೀಕರಿಸಿದ ಶಿಕ್ಷಕರನ್ನು ಸ್ಮರಿಸುವ ಮತ್ತು ಈ ಉದಾತ್ತ ವೃತ್ತಿಗೆ ನಮ್ಮ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸೋಣ.

chaithra

Recent Posts

ಹಿಂದೂ ಧರ್ಮರಕ್ಷಣೆಗಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಅವಶ್ಯಕತೆ

ಮಂಗಳೂರು : ಹಿಂದೂ ಜನಜಾಗೃತಿ ಸಮಿತಿ ಹಾಗೂ ಮಟ್ಟು ಮೊಗವೀರ ಮಾಹಾಸಭಾ, ಮಟ್ಟು ಪಟ್ಣ, ಹೆಜಮಾಡಿ, ಇದರ ಅಂಗ ಸಂಸ್ಥೆಯಾದ…

1 year ago

ಹಿಂದೂಗಳ ಜಾಗೃತಿಗಾಗಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಮಸ್ತ ಹಿಂದೂಗಳು ಒಟ್ಟಾಗೋಣ, ಈ ರಾಷ್ಟ್ರ ಕಾರ್ಯಕ್ಕಾಗಿ ತಮ್ಮ ಅಮೂಲ್ಯ ಯೋಗದಾನ ನೀಡೋಣ !…

1 year ago

ನಂಜನಗೂಡು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ !

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ ಬೆಂಗಳೂರು : ದಿನಾಂಕ 26…

1 year ago

ಅಯೋಧ್ಯೆಯಲ್ಲಿ ಮದ್ಯ ನಿಷೇಧಕ್ಕೆ ಆಗ್ರಹ; ಮಾನ್ಯ ಮಾಡಿದ ಯೋಗಿ ಸರಕಾರಕ್ಕೆ ಅಭಿನಂದನೆ !

ಅಯೋಧ್ಯೆಯಂತೆ ಕಾಶಿ ಮಥುರಾ ಸಹಿತ ಇತರ ಎಲ್ಲ ತೀರ್ಥಕ್ಷೇತ್ರಗಳಲ್ಲೂ ಮದ್ಯ ಮಾಂಸ ನಿಷೇಧಿಸಿ ! - ಮೋಹನ ಗೌಡ, ರಾಜ್ಯ…

1 year ago

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿ

ಪ್ರಶಾಂತ್ ಪೂಜಾರಿ ಹಾಗೂ ದೀಪಕ್ ರಾವ್ ಅವರ ಹತ್ಯೆಯ ವಿಷಯದಲ್ಲಿ ಮಾನ್ಯ ಮುಖ್ಯ ಮಂತ್ರಿಗೆ ಒಂದು ಮನವಿಯನ್ನು ನೀಡಲಾಯಿತು. ಆ…

1 year ago