500ಕ್ಕೂ ಹೆಚ್ಚಿನ ದೇವಸ್ಥಾನಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ದೇವಸ್ಥಾನಗಳ ಪರಿಷತ್ ಪ್ರಾರಂಭ !

By: Ommnews

Date:

Share post:

ಮುಂಬರುವ ದಿನಗಳಲ್ಲಿ ರಾಜ್ಯದ 500 ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ಹೋರಾಟ ನಡೆಯಲಿದೆ ! – ಶ್ರೀ. ಮೋಹನ ಗೌಡ, ರಾಜ್ಯವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

Advertisement
Advertisement
Advertisement

ಬೆಂಗಳೂರು : ಹಿಂದೂಗಳ ಸಂಘಟನೆಯಲ್ಲಿರುವ ಶಕ್ತಿಗೆ ಎಲ್ಲಕ್ಕಿಂತ ದೊಡ್ಡ ಉದಾಹರಣೆಯೆಂದರೆ ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ. 2016 ರಲ್ಲಿ ರಾಯಚೂರಿನ ಏಕಮಿನಾರನ ದುರಸ್ಥಿ ಮಾಡವಾಗ ಅಲ್ಲಿ ದೇವಸ್ಥಾನದ ಕಂಬಗಳು ಕಂಡು ಬಂದಿವೆ ಮತ್ತು ಅದೇ ರೀತಿ ಮಂಗಳೂರೊಂದರ ಮಸೀದಿಯ ಮರುಕಟ್ಟಡ ಮಾಡುವ ಸಂದರ್ಭದಲ್ಲಿ ದೇವಸ್ಥಾನದ ಅವಶೇಷಗಳು ದೊರಕಿವೆ. ಹಿಂದೂ ಸಂಘಟನೆಗಳು ಸಂಘಟಿತರಾಗಿ ಬಾಬರಿ ಮಸೀದಿ ಮುಕ್ತ ಮಾಡಿ ರಾಮ ಮಂದಿರ ನಿರ್ಮಾಣ ಮಾಡುವುದಾದರೆ ಇದೇ ರೀತಿ ಇತರ ಮಂದಿರಗಳನ್ನು ನಿರ್ಮಾಣ ಮಾಡಲು ಏಕೆ ಸಾಧ್ಯವಿಲ್ಲವೆಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆರವರು ರಾಜ್ಯ ಮಟ್ಟದ ದೇವಸ್ಥಾನ ಪರಿಷದ್ ನಲ್ಲಿ ಕರೆ ನೀಡಿದರು. ಅವರು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 16 ಹಾಗೂ 17 ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆಂನ್ಷನ್ ಸೆಂಟರ್ ನಲ್ಲಿ ಆಯೋಜಿಸಿದ್ದ ದೇವಸ್ಥಾನಗಳ ರಾಜ್ಯ ಮಟ್ಟದ ಪರಿಷತ್ತಿನಲ್ಲಿ ಮಾತನಾಡಿದರು. ಆದಿಚುಂಚನ ಗಿರಿ ಮಠದ ಪೂ. ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ, ಭಾರತೀಯ ಸಂಪ್ರದಾಯ ಟ್ರಸ್ಟ್ ನ ಡಾ. ಮಹರ್ಷಿ ಗುರೂಜಿ, ನ್ಯಾಯವಾದಿ ಅಶೋಕ ಹಾರ‍್ನಹಳ್ಳಿ ಮತ್ತು ಸನಾತನ ಸಂಸ್ಥೆಯ ಪೂ. ರಮಾನಂದ ಗೌಡ ಇವರು ಎರಡು ದಿನಗಳ ಪರಿಷತ್ತಿನ ಉದ್ಘಾಟನೆ ಮಾಡಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಮಾತನಾಡಿ ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಅದರದ್ದೇ ಆದ ಶಿಷ್ಟಾಚಾರಗಳು ನಡೆದುಕೊಂಡು ಬರುತ್ತಿದೆ. ಪೊಲೀಸರು, ಸರಕಾರಿ ಕಛೇರಿಗಳು, ಶಾಲೆಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಈಗ ಅಲ್ಲಿನ ಸಮವಸ್ತ್ರವನ್ನು ಧರಿಸಿಯೇ ಹೋಗಬೇಕಾಗುತ್ತದೆ. ಹೀಗಿರುವಾಗ ಹಿಂದೂ ದೇವಸ್ಥಾನಗಳಿಗೆ ಹೋಗುವಾಗ ನಮ್ಮದೇ ಆದ ವಸ್ತ್ರಸಂಹಿತೆ ಇರಬೇಕು. ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿದರೆ ದರ್ಶನ ಪಡೆಯುವ ಭಕ್ತರಿಗೂ ಅಲ್ಲಿನ ಪೂರ್ಣ ಲಾಭವಾಗುತ್ತದೆ, ಹಾಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಾಗಿ ರಾಜ್ಯದ 500 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ಇಂದೇ ಸಂಕಲ್ಪ ಮಾಡೋಣ ಎಂದರು.

ಪರಿಷತ್ತಿನ ಪ್ರಾರಂಭದಲ್ಲಿ ಈ ಪರಿಷತ್ತಿನ ನಿಮಿತ್ತವಾಗಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಶ್ರೀ ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿಯ ಶ್ರೀ ಶಾರದಾ ಪೀಠದ ಶ್ರೀ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ಮತ್ತು ರಾಮಚಂದ್ರಾಪುರ ಮಠದ ಶ್ರೀಮಧ್ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತಿ ಸ್ವಾಮೀಜಿಗಳು ನೀಡಿದ ಸಂದೇಶದ ಕಿರುಚಿತ್ರವನ್ನು ತೋರಿಸಲಾಯಿತು. ನಂತರ ಹಿಂದೂ ಜನಜಾಗೃತಿ ಸಮಿತಿಯ ಕನ್ನಡ ಜಾಲತಾಣ Hindujagruti.org/Kannada ಮತ್ತು ‘ಸನಾತನ ಪಂಚಾಂಗ 2024 ಮೊಬೈಲ್ ಆಪ್ ಲೋಕಾರ್ಪಣೆ ಮಾಡಲಾಯಿತು.

ಸಂಜೆ ಸತ್ರದಲ್ಲಿ ದೇವಸ್ಥಾನಗಳಲ್ಲಿ ಧರ್ಮಶಿಕ್ಷಣ ಫಲಕ ಅಳವಡಿಸುವ ಬಗ್ಗೆ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ, ಹಾಸನದ ಹಾಸನಾಂಬಾ ದೇವಿ ದೇವಸ್ಥಾನದಲ್ಲಿ ವಿಐಪಿ ಪ್ರವೇಶದ ವಿರುದ್ಧದ ಹೋರಾಟದ ಬಗ್ಗೆ ಡಾ. ಎನ್. ರಮೇಶ್ ಹಾಸನ್ ಸೇರಿ ಇನ್ನೂ ಅನೇಕ ದೇವಸ್ಥಾನ ವಿಶ್ವಸ್ಥರು ತಮ್ಮ ಅನುಭವ ವ್ಯಕ್ತಪಡಿಸಿದರು. ಮತ್ತು ಮುಂದಿನ ದಿನಗಳಲ್ಲಿ ದೇವಸ್ಥಾನ ಮಹಾಸಂಘದ ವತಿಯಿಂದ ನಡೆಸಲಾಗುವ ಕಾರ್ಯಚಟುವಟಿಕೆಗಳ ಬಗ್ಗೆ ಗುಂಪು ಚರ್ಚೆ ನಡೆಯಿತು.

ಉದ್ಘಾಟನೆ ಮಾಡುತ್ತಿರುವ (ಎಡದಿಂದ) ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ, ಆದಿಚುಂಚನ ಗಿರಿ ಮಠದ ಪೂ. ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ, ಭಾರತೀಯ ಸಂಪ್ರದಾಯ ಟ್ರಸ್ಟ್ ನ ಡಾ. ಮಹರ್ಷಿ ಗುರೂಜಿ, ನ್ಯಾಯವಾದಿ ಅಶೋಕ ಹಾರ‍್ನಹಳ್ಳಿ ಮತ್ತು ಸನಾತನ ಸಂಸ್ಥೆಯ ಪೂ. ರಮಾನಂದ ಗೌಡ

ವೇದಿಕೆಯಲ್ಲಿ ಉಪಸ್ಥಿತ ಸಂತರು ಮತ್ತು ಗಣ್ಯರು

ಉಪಸ್ಥಿತಿI

ಶ್ರೀ. ರಮೇಶ್ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

– ಶ್ರೀ. ಮೋಹನ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ತಮ್ಮ ಸವಿನಯ, ಶ್ರೀ. ಮೋಹನ ಗೌಡ, ಸಮನ್ವಯಕರು, ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ (ಸಂಪರ್ಕ : ೭೨೦೪೦೮೨೬೦೯)

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section