ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ನಿಧನ

0
112

ವಾಷಿಂಗ್ಟನ್: ಅಮೆರಿಕದ ಮಾಜಿ ಕಾರ್ಯದರ್ಶಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹೆನ್ರಿ ಕಿಸ್ಸಿಂಜರ್ (100) ನಿಧನರಾದರು.

ಇವರು ಶೀತಲ ಸಮರದ ಸಮಯದಲ್ಲಿ ಯುಎಸ್ ವಿದೇಶಾಂಗ ನೀತಿಯಲ್ಲಿ ಪ್ರಮುಖ ಮತ್ತು ಧ್ರುವೀಕರಣದ ಪಾತ್ರವನ್ನು ವಹಿಸಿದ್ದರು.

ಅವರು ನಿಕ್ಸನ್ ಮತ್ತು ಫೋರ್ಡ್ ಆಡಳಿತದ ಅವಧಿಯಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.

ಜರ್ಮನ್ ಮೂಲದ ಹೆನ್ರಿ ಕಿಸ್ಸಿಂಜರ್ ಕನೆಕ್ಟಿಕಟ್‌ನಲ್ಲಿರುವ ಅವರ ಮನೆಯಲ್ಲಿ ನಿಧನಹೊಂದಿದ್ದು. ಹೆನ್ರಿ ಅವರೇ ಸ್ಥಾಪಿಸಿದ ನೀತಿ ಸಲಹಾ ಸಂಸ್ಥೆಯಾದ ಕಿಸ್ಸಿಂಜರ್ ಅಸೋಸಿಯೇಟ್ಸ್‌ನಿಂದ ಬುಧವಾರ ನಿಧನದ ಸುದ್ದಿ ಹೊರಬಿದ್ದಿದೆ.

ಹೆನ್ರಿ ಅವರ ನಿಧನಕ್ಕೆ ಯುಎಸ್ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಶ್ರದ್ಧಾಂಜಲಿ ಸಲ್ಲಿಸಿದರು, ಯುಎಸ್ “ವಿದೇಶಿ ವ್ಯವಹಾರಗಳ ಮೇಲೆ ಅತ್ಯಂತ ವಿಶ್ವಾಸಾರ್ಹ ಮತ್ತು ವಿಶಿಷ್ಟವಾದ ಧ್ವನಿಯನ್ನು ನಾವು ಕಳೆದುಕೊಂಡಿದೆ” ಎಂದು ಹೇಳಿದರು.

LEAVE A REPLY

Please enter your comment!
Please enter your name here