
ಪುತ್ತೂರಿನ ಟೀಮ್ ಒಳಿತು ಮಾಡು ಮನುಷ ತಂಡದ ಮುಂದಾಳತ್ವದಲ್ಲಿ ಜೆಸಿಐ ಪುತ್ತೂರು, ರೋಟರಿಕ್ಲಬ್ ಪುತ್ತೂರು ಎಲೈಟ್, ಪುತ್ತೂರು ಪೂರ್ವ, ಪುತ್ತೂರು ಸಿಟಿ, ಪುತ್ತೂರು ಸೆಂಟ್ರಲ್, ಲಯನ್ಸ್ ಕ್ಲಬ್ ಪುತ್ತೂರು, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು, ಶ್ರೀ ವಿಷ್ಣು ಯುವಕ ಮಂಡಲ( ರಿ ) ಕೆಮ್ಮಾಯಿ, ಭವತಿ ಬಿಕ್ಷಾ ದೇಹಿ ಬಡವರ ಬಂಧು ಸೇವಾ ತಂಡ ಕುಕ್ಕಿಪ್ಪಾಡಿ ಬಂಟ್ವಾಳ, ಓಂ ನ್ಯೂಸ್ ಬಳಗ ಪುತ್ತೂರು, ಶ್ರೀ ಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ (ರಿ )ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತರಿಗೆ 27ನೇ ಯೋಜನೆಯಾಗಿ ಆಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ, ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇದರ ಸಹಭಾಗಿತ್ವದಲ್ಲಿಆಧಾರ್ ನೋಂದಣಿ ಮತ್ತು ಪರಿಷ್ಕರಣೆ, 399ರ ಅಪಘಾತ ವಿಮೆಯ ಶಿಬಿರ, ಸಕ್ಷಮ ಪುತ್ತೂರು ಮತ್ತು ವಿಷನ್ ಐ ಕೇರ್ ಆಪ್ಟಿಕಲ್ಸ್ ಪುತ್ತೂರು ಸಹಭಾಗಿತ್ವದಲ್ಲಿ ನೇತ್ರದಾನ ನೋಂದಣಿ ಶಿಬಿರ ಮತ್ತು ಉಚಿತ ಕಣ್ಣಿನ ಚಿಕಿತ್ಸಾ ತಪಾಸಣಾ ಶಿಬಿರ, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಪುತ್ತೂರು ಇದರ ಸಹಭಾಗಿತ್ವದಲ್ಲಿ ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ, ಎಂ ವಿ ಗ್ರೂಪ್ ಆಫ್ ಸೋಶಿಯಲ್ ಸರ್ವಿಸ್ ನೆಹರು ನಗರ ಇದರ ಸಹಭಾಗಿತ್ವದಲ್ಲಿ ಉಚಿತ ಆಯುಷ್ಮಾನ್ ಅಭಾ ಕಾರ್ಡ್ ಶಿಬಿರ ಕಾರ್ಯಕ್ರಮವು ನವೆಂಬರ್ 28 ಬುಧವಾರದಂದು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ವೇದಿಕೆಯಲ್ಲಿರುವ ಅತಿಥಿ ಗಣ್ಯರು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪುತ್ತೂರು ಸೆಂಟ್ರಲ್ ಇದರ ಅಧ್ಯಕ್ಷರಾದ ರಾಜೇಶ್ ಬೆಜ್ಜಂಗಳ ಇವರು ಮಾತನಾಡಿ, ಎಲ್ಲರಿಗೂ ವಿವಿಧ ರೀತಿಯಿಂದ ಸಂತೋಷ ಸಿಗುತ್ತದೆ ಆದರೆ ಚೇತನ್ ಕುಮಾರ್ ದಂಪತಿಗಳಿಗೆ ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಸಂತೋಷ ಸಿಗುತ್ತದೆ. ಸಮಾಜ ಸೇವೆ ಮಾಡಲು ಹೃದಯ ಶ್ರೀಮಂತಿಕೆ ಬೇಕು. ಇವರು ನಗರದ ಪರಿಧಿಯಲ್ಲಿ ಅಸಹಾಯಕರಿಗೆ ತಮ್ಮಿಂದಾದ ಸಹಾಯಹಸ್ತವನ್ನು ಚಾಚುತ್ತಿದ್ದಾರೆ. ಫಲಾನುಭವಿಗಳು ಆಹಾರ ಸಾಮಗ್ರಿಗಳನ್ನು ಪಡೆದುಕೊಂಡು ಸಮಾಜಕ್ಕೆ ಇನ್ನಷ್ಟು ಈ ಟ್ರಸ್ಟ್ ಮುಖಾಂತರ ಸಹಾಯವಾಗಲಿ ಎಂದು ಯಾವಾಗಲೂ ಪ್ರಾರ್ಥಿಸಬೇಕು. ಈ ಟ್ರಸ್ಟ್ ಜೊತೆ ಬೆನ್ನೆಲುಬಾಗಿ ಇನ್ನೂ ಸಹ ನಾವಿರುತ್ತೇವೆ ಎಂದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಇದರ ಕಾರ್ಯದರ್ಶಿಗಳಾದ ಆಸ್ಕರ್ ಆನಂದ್ ಇವರು ಮಾತನಾಡಿ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಮಾಡಬೇಕು. ಒಳಿತು ಮಾಡು ಮನುಷ ತಂಡಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.
ಟ್ರಸ್ಟ್ ನ ಅಧ್ಯಕ್ಷರಾದ ಶೋಭಾ ಮಡಿವಾಳ ರವರು ಮಾತನಾಡಿ, ಈ ಟ್ರಸ್ಟ್ ಸಣ್ಣದಿಂದ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಇನ್ನು ಮುಂದೆಯೂ ಒಳ್ಳೊಳ್ಳೆ ಕಾರ್ಯಕ್ರಮಗಳು ಈ ಟ್ರಸ್ಟ್ ನಿಂದ ನೆರವೇರಲು ನಮ್ಮ ಟ್ರಸ್ಟ್ ಜೊತೆ ನೀವೆಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿಕೊಂಡರು.
ಟ್ರಸ್ಟ್ ನ ಸಂಚಾಲಕರಾದ ಕೃಷ್ಣಪ್ಪ ಶಿವನಗರ ಇವರು ಮಾತನಾಡಿ, ಚೇತನ್ ಕುಮಾರ್ ರವರು ಸ್ಥಾಪಿಸಿದ ವಿಷನ್ ಸಹಾಯನಿಧಿ ಟ್ರಸ್ಟ್ ಪುತ್ತೂರಿನಲ್ಲಿ ಪ್ರಾರಂಭವಾದ ಪ್ರಥಮ ಟ್ರಸ್ಟ್. ಸಣ್ಣ ಮಟ್ಟದಲ್ಲಿ ಪ್ರಾರಂಭವಾದ ಈ ಟ್ರಸ್ಟ್ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲಿ ಈ ಟ್ರಸ್ಟ್ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.
ಭಾರತೀಯ ಅಂಚೆ ಇಲಾಖೆ ಪುತ್ತೂರು, ಸಕ್ಷಮ ಪುತ್ತೂರು ಮತ್ತು ವಿಷನ್ ಐ ಕೇರ್ ಆಪ್ಟಿಕಲ್ಸ್ ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ ಪುತ್ತೂರು ಹಾಗೂ ಎಂ ವಿ ಗ್ರೂಪ್ ಆಫ್ ಸೋಶಿಯಲ್ ಸರ್ವಿಸ್ ನೆಹರು ನಗರ ಇವುಗಳ ಎಲ್ಲಾ ಸಿಬ್ಬಂದಿ ವರ್ಗದವರಿಗೆ ವೇದಿಕೆಯಲ್ಲಿರುವ ಗಣ್ಯರು ಹೂ ನೀಡಿ ಗೌರವಿಸಿದರು.
ಭವತಿ ಭಿಕ್ಷಾಂ ದೇಹಿ ಕುಕ್ಕಿಪ್ಪಾಡಿ, ಬಂಟ್ವಾಳ ಇದರ ಸ್ಥಾಪಕಾಧ್ಯಕ್ಷರಾದ ಗುರುರಾಜ್ ಕುಕ್ಕಿಪ್ಪಾಡಿ ಇವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಸೆಂಟ್ರಲ್ ಇದರ ಅಧ್ಯಕ್ಷರಾದ ರಾಜೇಶ್ ಬೆಜ್ಜಂಗಳ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಇದರ ಕಾರ್ಯದರ್ಶಿಗಳಾದ ಆಸ್ಕರ್ ಆನಂದ್, ಬೆಳ್ತಂಗಡಿ ಡಯಾಲಿಸಿಸ್ ನ ಮಾಜಿ ಮುಖ್ಯಸ್ಥರಾದ ರಕ್ಷಿತ್ ಎ ಜೆ, ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ಶೋಭಾ ಮಡಿವಾಳ, ಸ್ಥಾಪಕಾಧ್ಯಕ್ಷರಾದ ಚೇತನ್ ಕುಮಾರ್, ಗೌರವಾಧ್ಯಕ್ಷರಾದ ಶರತ್ ಕುಮಾರ್, ಸಂಚಾಲಕರಾದ ಕೃಷ್ಣಪ್ಪ ಶಿವನಗರ, ಸಂಘಟನಾಧ್ಯಕ್ಷರಾದ ಜಯರಾಜ್ ಅಮೀನ್ ಹಾಗೂ ದಾನಿ ಭವಾನಿ ನೂಜಿ, ಟ್ರಸ್ಟಿನ ಸದಸ್ಯರಾದ ಶ್ರೀಮತಿ ಸರಸ್ವತಿ ಬನ್ನೂರು, ಕಾವ್ಯ ಬನ್ನೂರು, ಮಮತಾ, ಕಾವ್ಯ, ಸೌಜನ್ಯ, ರಶ್ಮಿತ, ಅಕ್ಷಯ್, ಸಮಂತ್ ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ರಕ್ಷಾ, ಶೃತಿಕಾ ಹಾಗೂ ಆತ್ಮಿ ನೆರವೇರಿಸಿದರು, ಸ್ವಾಗತವನ್ನು ಶ್ರೀಮತಿ ಶೃತಿಕಾ, ಧನ್ಯವಾದವನ್ನು ಶ್ರೀಮತಿ ಗೀತಾ ನಿರ್ವಹಿಸಿದರು. ಭವತಿ ಭಿಕ್ಷಾಂ ದೇಹಿ ತಂಡದ ಸ್ಥಾಪಕಾಧ್ಯಕ್ಷರಾದ ಗುರುರಾಜ್ ಕುಕ್ಕಿಪ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.