ಬೆಳ್ಳಾರೆ: ಮದ್ಯದ ನಶೆಯಲ್ಲಿ ಯದ್ವಾತದ್ವಾ ಕತ್ತಿ ಬೀಸಿದ ಮಗ, ತಂದೆ-ತಾಯಿಗೆ ಗಂಭೀರ ಗಾಯ

0
106

ಬೆಳ್ಳಾರೆ : ಮದ್ಯದ ನಶೆಯಲ್ಲಿ ಪುಂಡ ಮಗನೊಬ್ಬ ಹೆತ್ತ ತಂದೆ-ತಾಯಿಯ ಮೇಲೆಯೇ ಕತ್ತಿಯಿಂದ ದಾಳಿ ನಡೆಸಿದ ಘಟನೆ ಬೆಳ್ಳಾರೆ ಸಮೀಪದ ಕಲ್ಲಗುಡ್ಡೆ ಕೊಡಿಯಾಲದಲ್ಲಿ ನಡೆದಿದೆ.

ಬೆಳ್ಳಾರೆ ಸಮೀಪದ ಕಲ್ಲಗುಡ್ಡೆ ಕೊಡಿಯಾಲ ನಿವಾಸಿಗಳಾದ ಮಂಜುನಾಥ್ ಹಾಗೂ ಧರ್ಮವತಿ ಎಂಬವರನ್ನು ಮಗ ದೇವಿ ಪ್ರಸಾದ್ ಮದ್ಯದ ನಶೆಯಲ್ಲಿ ಮನೆಗೆ ಬಂದು ಜಾಗದ ವಿಚಾರವಾಗಿ ಜಗಳ ತೆಗೆದು ಏಕಾಏಕಿ ಕತ್ತಿಯಿಂದ ದಾಳಿ ನಡೆಸಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಆರೋಪಿ ಎಸ್ಕೇಪ್ ಆಗಿದ್ದು ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here