ಭೂಮಿಗೆ ಮರಳಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅವಶೇಷ

By: Ommnews

Date:

Share post:

ಬೆಂಗಳೂರು : ಚಂದ್ರಯಾನ 3 ಬಾಹ್ಯಾಕಾಶ ನೌಕೆಯಯನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್​ವಿಎಂ ಎಂ 4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Advertisement
Advertisement
Advertisement

ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಚಂದ್ರಯಾನ 3 ಉಡಾವಣೆಯಾಗಿತ್ತು, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು. ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್​ವಿಎಂ ಎಂ 4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ. ಈ ಮಾಹಿತಿಯನ್ನು ಇಸ್ರೋ ನೀಡಿದೆ.

ಭಾರತವು ಚಂದ್ರನನ್ನು ತಲುಪಿದ ವಿಶ್ವದ ನಾಲ್ಕನೇ ದೇಶ ಮತ್ತು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. ಇಳಿದ ನಂತರ ಸುಮಾರು 14 ದಿನಗಳಲ್ಲಿ ಅನೇಕ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲಾಯಿತು. ಸೆಪ್ಟೆಂಬರ್ 2ರಂದು ಸ್ಲೀಪ್​ ಮೋಡ್​ಗೆ ಹೋದ ವಿಕ್ರಮ್ ಲ್ಯಾಂಡರ್ ಇನ್ನೂ ದೀರ್ಘ ನಿದ್ರೆಯಲ್ಲಿದೆ, ಇಸ್ರೋ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಲ್ಯಾಂಡರ್ ಮತ್ತು ರೋವರ್​ ಅನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section