ಆಲ್ಟೋ ಕಾರು-ಟೆಂಪೊ ಟ್ರಾವೆಲರ್‌ ನಡುವೆ ಅಪಘಾತ

0
109

ಸುಳ್ಯ: ಸುಳ್ಯದ ದೇವರಕೊಲ್ಲಿಯಲ್ಲಿ ಆಲ್ಟೋ ಕಾರು ಮತ್ತು ಟೆಂಪೊ ಟ್ರಾವೆಲರ್‌ ನಡುವೆ ಅಪಘಾತ ಸಂಭವಿಸಿ ಎರಡು ವಾಹನಗಳ ಮುಂಭಾಗ ಜಖಂಗೊಂಡಿದೆ.

ಕಾರು ಮಡಿಕೇರಿ ಭಾಗದಿಂದ ಸುಳ್ಯ ಕಡೆಗೆ ಬರುತ್ತಿತ್ತು. ಟೆಂಪೊ ಟ್ರಾವೆಲರ್‌ ಸುಳ್ಯ ಕಡೆಯಿಂದ ಮಡಿಕೇರಿಗೆ ತೆರಳುತ್ತಿತ್ತು. ಈ ಸಂದರ್ಭ ದೇವರಕೊಲ್ಲಿ ಸಮೀಪದ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಟೆಂಪೊ ಟ್ರಾವೆಲರ್‌ಗೆ ಡಿಕ್ಕಿಯಾಗಿದೆ.

ಅಪಘಾತದಿಂದ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here