ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಜಯ

By: Ommnews

Date:

Share post:

ಅಹಮದಾಬಾದ್​: ದಕ್ಷಿಣ ಆಫ್ರಿಕಾ ತಂಡ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್​ ಗೆಲುವು ಸಾಧಿಸಿದೆ.

Advertisement
Advertisement
Advertisement

ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಅಫಘಾನಿಸ್ತಾನ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 50 ಓವರ್​ಗಳಲ್ಲಿ 244 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 247 ರನ್ ಬಾರಿಸಿ ಗೆಲುವು ಸಾಧಿಸಿತು.

ದಕ್ಷಿಣ ಆಫ್ರಿಕಾ ಗೆಲುವನ್ನು ಪಡೆದ ಹೊರತಾಗಿಯೂ ನಿರೀಕ್ಷಿಸಿದ ರೀತಿಯಲ್ಲಿ ದೊರಕಲಿಲ್ಲ. ಮಧ್ಯಮ ಓವರ್​ಗಳಲ್ಲಿ ವಿಕೆಟ್​ಗಳನ್ನು ಕಳೆದುಕೊಂಡಿತು. ವ್ಯಾನ್ ಡೆರ್ ಡುಸೆನ್ (76) ಅತ್ಯುತ್ತಮ ಪ್ರದರ್ಶನ ನೀಡಿ ತಂಡವನ್ನು ಗೆಲ್ಲಿಸಿದರು. ಅವರು ತಂಡದ ಮೇಲೆ ಒತ್ತಡ ಬೀಳಲು ಬಿಡಲಿಲ್ಲ. ಅವರು ಕೊನೇ ತನಕ ಔಟಾಗದೇ ಉಳಿದು ಗೆಲ್ಲಿಸಿಕೊಟ್ಟರು. ಇದಕ್ಕೂ ಮುನ್ನ ಡಿ ಕಾಕ್ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭ ನೀಡಿದರು. ಅವರು 41 ರನ್ ಬಾರಿಸಿದರು.

ನಾಯಕ ಬವುಮಾ (23 ರನ್​) ಲಯ ಮತ್ತು ಫಿಟ್ನೆಸ್ ಪಡೆದು ಹೋರಾಡುವಲ್ಲಿ ಹೆಣಗಾಡಿದರು. ಮಾರ್ಕ್ರಮ್ (25), ಕ್ಲಾಸೆನ್ (10 ನರ್​) ಮತ್ತು ಮಿಲ್ಲರ್ (24) ಗೆಲುವಿಗಾಗಿ ಕೊಡುಗೆ ಕೊಟ್ಟರು. ಕೊನೆಯಲ್ಲಿ ಫೆಹ್ಲುಕ್ವಾಯೊ (39) ಬಿರುಸಿನ ಆಟವಾಡಿ ಗೆಲುವು ತಂದುಕೊಟ್ಟರು. ಅವರುವ್ಯಾನ್ ಡೆರ್ ಡುಸೆನ್ ಅವರೊಂದಿಗೆ 65 ರನ್​ಗಳ ಜತೆಯಾಟ ನೀಡಿದರು.

ಅಫ್ಘಾನಿಸ್ತಾನ ತಂಡದ ಅಜ್ಮತುಲ್ಲಾ ಒಮರ್ಜೈ ಅಜೇಯ 97 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ನೂರ್​ ಅಹಮದ್​ 26 ರನ್​ ಹಾಗೂ ರಹ್ಮತ್ ಶಾ 26 ರನ್ ಮತ್ತು ಗುರ್ಬಜ್​ 25 ರನ್ ಗಳಿಸಿದರು. ಆದರೆ, ಬೌಲಿಂಗ್​ ವೇಳೆ ಎದುರಾಳಿ ಮೇಲೆ ಒತ್ತಡ ಹೇರಿದರು. ದಕ್ಷಿಣ ಆಫ್ರಿಕಾದ ಸ್ಕೋರಿಂಗ್ ವೇಗವನ್ನು ನಿಯಂತ್ರಣದಲ್ಲಿಡಲು ಮತ್ತು ಆಟವನ್ನು ಇಷ್ಟು ಕೊನೆ ತನಕ ಕೊಂಡೊಯ್ಯಲು ಸಫಲರಾದರು. ರಶೀದ್ ಮತ್ತು ನಬಿ ತಲಾ ಎರಡು ವಿಕೆಟ್ ಪಡೆದರೆ ಇನ್ನೊಂದು ವಿಕೆಟ್ ಮುಜೀಬ್ ಗೆ ಸಿಕ್ಕಿತು . ನೂರ್ ಸ್ವಲ್ಪ ಕಳೆಗುಂದಿದರು. ನವಿನ್ ಉಲ್ ಹಕ್​ ಕೂಡ ದುಬಾರಿಯಾದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section