ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 5 ವಿಕೆಟ್‌ಗಳ ಜಯ

By: Ommnews

Date:

Share post:

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ನ್ಯೂಜಿಲೆಂಡ್‌ 5 ವಿಕೆಟ್‌ಗಳಿಂದ ಮಣಿಸಿತು.

Advertisement
Advertisement
Advertisement

ಟಾಸ್ ಗೆದ್ದ ನ್ಯೂಜಿಲೆಂಡ್‌​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ 46.4 ಓವರ್​ಗಳಲ್ಲಿ 171 ರನ್​ಗಳಿಗೆ ಆಲ್​ಔಟ್ ಆಯಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ ಇನ್ನೂ 160 ಬಾಕಿ ಇರುವಂತೆಯೇ 5 ವಿಕೆಟ್​ ಕಳೆದುಕೊಂಡು 172 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್‌ ತಂಡ 25 ಓವರ್​ಗಳ ಒಳಗೆ ಆಟ ಮುಗಿಸಿ ಗರಿಷ್ಠ ರನ್​ರೇಟ್​ನೊಂದಿಗೆ ಆಡಿತು. ಪೂರಕವಾಗಿ ಮೊದಲ ವಿಕೆಟ್​ಗೆ 86 ರನ್ ಬಾರಿಸಿತು. ಆರಂಭಿಕ ಬ್ಯಾಟರ್​ಗಳಾದ ಡೆವೋನ್​ ಕಾನ್ವೆ (45) ಹಾಗೂ ರಚಿನ್ ರವೀಂದ್ರ (42) ಉತ್ತಮ ಆರಂಭ ತಂದುಕೊಟ್ಟರು. ಆದರೆ, ಈ ಇಬ್ಬರು ಬ್ಯಾಟಿಂಗ್​ನಲ್ಲಿ ಇನ್ನಷ್ಟು ಬಿರುಸು ತರಲು ಹೋಗಿ ಔಟಾದರು. ಬಳಿಕ ಕೇನ್ ವಿಲಿಮ್ಸನ್​ 14 ರನ್​ ಕೊಡುಗೆ ಕೊಟ್ಟರು. ಡ್ಯಾರಿಲ್ ಮಿಚೆಲ್ ಗುರಿಯನ್ನು ಬೇಗ ಮುಟ್ಟುವ ಉದ್ದೇಶದಿಂದ 31 ಎಸೆತಕ್ಕೆ 43 ರನ್ ಬಾರಿಸಿದರು. ಮಾರ್ಕ್​ ಚಾಪ್ಮನ್ ಅನಗತ್ಯ ರನ್​ಔಟ್​ಗೆ ಬಲಿಯಾದರು. ಕೊನೆಯಲ್ಲಿ ಗ್ಲೆನ್​ ಫಿಲಿಪ್ಸ್​ 17 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಲಂಕಾ ತಂಡ 32 ರನ್​ಗಳಿಗೆ ಮೊದಲ 3 ವಿಕೆಟ್ ನಷ್ಟಮಾಡಿಕೊಂಡಿತು. ಪಾಥುಮ್ ನಿಸ್ಸಾಂಕ 2 ರನ್​ಗೆ ಔಟಾದರೆ, ಕುಸಾಲ್ ಮೆಂಡಿಸ್​ 6 ಮತ್ತು ಸದೀರಾ ಸಮರವಿಕ್ರಮ 1 ರನ್​ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ, ಮತ್ತೊಬ್ಬ ಆರಂಭಿಕ ಬ್ಯಾಟರ್ ಕುಸಾಲ್ ಪೆರೆರಾ 28 ಎಸೆತಗಳಲ್ಲಿ 51 ರನ್ ಬಾರಿಸಿದರು.

ಲಂಕಾ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳೂ ತಂಡಕ್ಕೆ ಹೆಚ್ಚು ನೆರವಾಗಲಿಲ್ಲ. ಮ್ಯಾಥ್ಯೂಸ್ 16 ರನ್ ಬಾರಿಸಿದರೆ, ಧನಂಜಯ ಡಿಸಿಲ್ವಾ 19 ರನ್​ಗೆ ಔಟಾದರು. ಚಾಮಿಕಾ ಕರುಣಾರತ್ನೆ 6 ರನ್​ಗೆ ಸೀಮಿತಗೊಂಡರು. ಆದರೆ, ಸ್ಪಿನ್ನರ್ ಮಹೀಶ್​ ತೀಕ್ಷಣಾ 91 ಎಸೆತಗಳನ್ನು ಎದುರಿಸಿ 38 ರನ್​ ಬಾರಿಸಿದರು. ಕೊನೆಯಲ್ಲಿ ಮಧು ಶಂಕಾ 19 ರನ್ ಕೊಡುಗೆ ಕೊಟ್ಟರು. ಈ ಜೋಡಿ 10ನೇ ವಿಕೆಟ್​ಗೆ 43 ರನ್ ಬಾರಿಸಿದ ಕಾರಣ ತಂಡಕ್ಕೆ ಸ್ವಲ್ಪ ನೆರವಾಯಿತು.

ನ್ಯೂಜಿಲೆಂಡ್‌ ಪರ ಬೌಲ್ಟ್​ 3, ಫರ್ಗ್ಯೂಸನ್​, ಸ್ಯಾಂಟ್ನರ್ ಹಾಗೂ ರಚಿನ್ ರವೀಂದ್ರ ತಲಾ ಎರಡು ವಿಕೆಟ್​ ಉರುಳಿಸಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section