ದೀಪಾವಳಿ

By: Ommnews

Date:

Share post:

ದೀಪಾವಳಿ ಎಂದರೆ ದೀಪಗಳ ಸಾಲು, ಹೊಸ ಬಟ್ಟೆಬರೆ, ಬಗೆ-ಬಗೆಯ ತಿಂಡಿ-ತಿನಿಸು, ರಂಗೋಲಿಗಳು ಇವೇ ಕಣ್ಮುಂದೆ ಕಾಣಿಸುತ್ತವೆ. ದೀಪಾವಳಿಯಂತಹ ಹಬ್ಬವನ್ನು ಆಚರಿಸುವಾಗ, ಶಾಸ್ತ್ರವನ್ನರಿತು ಆಚರಿಸಿದರೆ, ಆನಂದದೊಂದಿಗೆ ಚೈತನ್ಯದ ಅನುಭೂತಿಯನ್ನೂ ಪಡೆಯಬಹುದು. ಶ್ರೀ ಲಕ್ಷ್ಮೀದೇವಿ, ಶ್ರೀಕೃಷ್ಣ, ಶ್ರೀರಾಮ, ಧನ್ವಂತರಿ ದೇವತೆ, ಯಮದೇವತೆ ಮುಂತಾದ ದೇವತೆಗಳನ್ನು ಸ್ಮರಿಸುವ ಈ ದೀಪೋತ್ಸವವನ್ನು ಶಾಸ್ತ್ರಕ್ಕನುಸಾರ ಆಚರಿಸೋಣ ಹಾಗೂ ಆನಂದವನ್ನು ದ್ವಿಗುಣಗೊಳಿಸೋಣ

Advertisement
Advertisement
Advertisement

ದೀಪಾವಳಿ – ವಿವಿಧ ದಿನಗಳ ಮಹತ್ವ

ಧನತ್ರಯೋದಶಿ (10.11.2023)

ಸಾಧನೆಗಾಗಿ ಅನುಕೂಲ ಪರಿಸ್ಥಿತಿ ಮತ್ತು ಐಶ್ವರ್ಯವನ್ನು ಪಡೆಯಲು ಈ ದಿನ ಧನಲಕ್ಷ್ಮೀಯನ್ನು ಪೂಜಿಸೋಣ. ವರ್ಷವಿಡೀ ಯೋಗ್ಯ ಮಾರ್ಗದಿಂದ ಸಂಪಾದಿಸಿ ಬಾಕಿ ಉಳಿದಿರುವ ಧನದಿಂದ 1/6 ಪಾಲನ್ನು ಧರ್ಮಕಾರ್ಯಕ್ಕೆ ಅರ್ಪಿಸುವ ಉತ್ತಮ ದಿನವಿದು.ಸನಾತನದ ಅಧ್ಯಾತ್ಮಪ್ರಸಾರದ ಕಾರ್ಯದಲ್ಲಿ ಕೈಜೋಡಿಸಿ. ಅರ್ಪಣೆ ನೀಡಲು.

ಧನ್ವಂತರಿ ಜಯಂತಿ (10.11.2023)

ಆರೋಗ್ಯವನ್ನು ಪ್ರದಾನಿಸುವ ಧನ್ವಂತರಿ ದೇವತೆಗೆ ಪೂಜೆ ಸಲ್ಲಿಸಿ ಅಮೃತದಿಂದ ಉತ್ಪನ್ನವಾದ ಕಹಿಬೇವಿನ ಪ್ರಸಾದವನ್ನು ಸೇವಿಸೋಣ.

ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ) (12.11.2023)

ಅಭ್ಯಂಗಸ್ನಾನವನ್ನು ಮಾಡಿ ‘ನನ್ನೊಳಗಿರುವ ನರಕಾಸುರ ರೂಪಿ ಪಾಪವಾಸನೆ ಮತ್ತು ಅಹಂ ಅನ್ನು ನಾಶ ಮಾಡಿ ಈಶ್ವರಪ್ರಾಪ್ತಿಯ ಹಾದಿಯನ್ನು ಸುಲಭಗೊಳಿಸು’ ಎಂದು ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸೋಣ.

ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ) (12.11.2023)

ಶ್ರೀಲಕ್ಷ್ಮೀ ತತ್ತ್ವವನ್ನು ಆದಷ್ಟು ಹೆಚ್ಚು ಗ್ರಹಿಸಿ ಅದರ ಲಾಭ ಪಡೆಯಲು, ಗಳಿಸಿದ ಉತ್ಪನ್ನದ ಸದ್ಬಳಕೆಯಾಗುವಂತಾಗಲು ಭಾವಪೂರ್ಣವಾಗಿ ಶ್ರೀಲಕ್ಷ್ಮೀ ದೇವಿ ಮತ್ತು ಕುಬೇರರಿಗೆ ಪೂಜೆ ಸಲ್ಲಿಸೋಣ.

ಬಲಿಪಾಡ್ಯ (ದೀಪಾವಳಿ ಪಾಡ್ಯ) (14.11.2023)

ರಾಕ್ಷಸಕುಲದಲ್ಲಿ ಜನಿಸಿಯೂ ಶ್ರೀವಿಷ್ಣುವಿನ ಭಕ್ತನಾಗಿದ್ದ ಬಲಿರಾಜನನ್ನು ಸ್ಮರಿಸೋಣ.

ಸಹೋದರ ಬಿದಿಗೆ (ಯಮದ್ವಿತೀಯಾ) (15.11.2023)

ಸಹೋದರಿಯು ಸಹೋದರನಿಗೆ ಭಾವಪೂರ್ಣವಾಗಿ ಆರತಿಯನ್ನು ಬೆಳಗಿ, ಸಹೋದರನ ಆಯುಷ್ಯ ವೃದ್ಧಿಯಾಗುವಂತೆ ಪ್ರಾರ್ಥಿಸಬೇಕು. ಧರ್ಮದ ದೇವತೆಯಾಗಿರುವ ಯಮಧರ್ಮರಾಯನಿಗೆ ‘ಅಪಮೃತ್ಯು ಬಾರದಿರಲಿ’ ಎಂದು ಪ್ರಾರ್ಥನೆ ಸಲ್ಲಿಸೋಣ.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

ಇತಿ ತಮ್ಮ ವಿಶ್ವಾಸಿ, ಶ್ರೀ. ವಿನೋದ್ ಕಾಮತ್, ರಾಜ್ಯ ವಕ್ತಾರರು, ಸನಾತನ ಸಂಸ್ಥೆ ಸಂಪರ್ಕ : ೯೩೪೨೫೯೯೨೯೯

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section