ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ಭೀಕರ ದಾಳಿ

0
114

ಟೆಲ್‌ ಅವೀವ್‌: ಗಾಜಾಪಟ್ಟಿಯ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ಸೇನೆಯು ಬುಧವಾರ ಭೀಕರ ದಾಳಿ ನಡೆಸಿದೆ.

ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಹಮಾಸ್‌ ಉಗ್ರರ ಟಾಪ್‌ ಕಮಾಂಡರ್‌ ಇಬ್ರಾಹಿಂ ಬ್ಯಾರಿ ಹತ್ಯೆಗೀಡಾಗಿದೆ. ಇಸ್ರೇಲ್‌ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್‌ ದಾಳಿಯಲ್ಲಿ ಈತ ಪ್ರಮುಖ ಮಾರ್ಗದರ್ಶಕನೂ ಆಗಿದ್ದ ಎನ್ನಲಾಗಿದೆ.

ಇಸ್ರೇಲ್‌ ನಡೆಸಿದ ಈ ದಾಳಿಯಲ್ಲಿ ಸುಮಾರು 50 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಇಬ್ರಾಹಿಂ ಬ್ಯಾರಿಯನ್ನು ತೊಡೆದುಹಾಕಲು ನಿರಾಶ್ರಿತರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಪಡೆಗಳು ತಿಳಿಸಿವೆ. ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಸೇವಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ದೇಹಗಳು ಮತ್ತು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here