ಬೆಂಗಳೂರು : ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅರಣ್ಯಾಧಿಕಾರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ನಟ ಜಗ್ಗೇಶ್ ಅರ್ಜಿ ಸಲ್ಲಿಸಿದ್ದು, ನೋಟಿಸ್ ರದ್ದುಪಡಿಸುವಂತೆ ಮನವಿ ಸಲ್ಲಿಸಿದ್ದಾರೆ. ಅರಣ್ಯಾಧಿಕಾರಿಗಳು ನೀಡಿದ ನೋಟಿಸ್ ಗೆ ಉತ್ತರ ನೀಡುವುದರೊಳಗೆ ಅವರು ನನ್ನ ಮನೆ ಶೋಧ ನಡೆಸಿದ್ದಾರೆ.
ಪರಿಶೀಲನೆ ನೆಪದಲ್ಲಿ ನನ್ನ ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಚೆಲ್ಲಾಪೆಲ್ಲಿಯಾಗಿ ಮಾಡಿಹೋಗಿದ್ದಾರೆ.ಸಂದರ್ಶನದಲ್ಲಿ ಹೇಳಿದ ಮಾತನ್ನ ಆಧರಿಸಿ ತೇಜೋವಧೆ ಮಾಡಲಾಗುತ್ತಿದ್ದೆ ಎಂದು ನಟ ಜಗ್ಗೇಶ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ.