ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧಚಿತ್ರಕ್ಕೆ ಬ್ರೇಕ್, ಡಿಜೆ ನಿಷೇಧ!

By: Ommnews

Date:

Share post:

ಮಂಗಳೂರು :ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕುದ್ರೋಳಿ ಶ್ರೀಕ್ಷೇತ್ರ ಸಜ್ಜಾಗುತ್ತಿದೆ‌. ಈ ಬಾರಿಯ ದಸರಾ ಮೆರವಣಿಗೆ ಅ.25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಟ್ಯಾಬ್ಲೊ, ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಖಡಕ್ ನಿರ್ಧಾರ ತಳೆದಿದೆ.

Advertisement
Advertisement
Advertisement

ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ ಅವಕಾಶ ನೀಡುತ್ತಿಲ್ಲ‌. ಆದ್ದರಿಂದ ಇಂತಹ ಟ್ಯಾಬ್ಲೊಗಳು ಬಂದಲ್ಲಿ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಲಾಗಿದೆ. ಯಾವುದೇ ಜಾತಿ, ಧರ್ಮ, ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೊಗಳಿಗೂ ಅವಕಾಶ ಕೊಡುವುದಿಲ್ಲ ಎಂದು ಸೂಚನೆ ನೀಡಲಾಗಿದೆ.

ಡಿಜೆ ಸಂಸ್ಕೃತಿಗೂ ಕಡಿವಾಣ ಹಾಕೋ ಮೂಲಕ ವಿಭಿನ್ನ ದಸರಾ ಆಚರಣೆಗೆ ಮಂಗಳೂರಿನ ಕುದ್ರೋಳಿ ದೇವಸ್ಥಾನದ ಆಡಳಿತ ಹೆಜ್ಜೆ ಇಟ್ಟಿದೆ.

ನಂಬಿಕೆಯ ದೈವಗಳನ್ನ ಬೀದಿಗೆ ತಂದು ಕುಣಿದು ಕುಪ್ಪಳಿಸಲಾಗ್ತಿದೆ. ಸ್ತಬ್ಧ ಚಿತ್ರಗಳ ಹೆಸರಿನಲ್ಲಿ ದೈವಗಳ ಅವಹೇಳನ ನಡೀತಾ ಇದೆ. ಹೀಗಾಗಿಯೇ ಈ ಬಾರಿಯ ಪ್ರಖ್ಯಾತ ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ.

ಇನ್ನು ಈ ಬಾರಿಯ ಮಂಗಳೂರು ದಸರಾದ ಮೆರವಣಿಗೆಯಲ್ಲಿ ಹಲವು‌ ಬದಲಾವಣೆಗಳನ್ನು ಮಾಡಲಾಗಿದೆ. ಡಿಜೆಗೆ ನಿಷೇಧ ಹಾಕಲಾಗಿದ್ದು, ಭಜನಾ ತಂಡಗಳ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಗಿದೆ. ನೂರಾರು ಟ್ಯಾಬ್ಲೋಗಳು ಭಾಗವಹಿಸೋ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸಾಮರಸ್ಯದ ದಸರಾಕ್ಕೆ ಈ ಬಾರಿ ಮಂಗಳೂರು ದಸರಾ ಸಾಕ್ಷಿಯಾಗಲಿದೆ. ಎಲ್ಲಾ ಜಾತಿ ಮತ, ಧರ್ಮದವರು ಈ ದಸರಾದಲ್ಲಿ ಪಾಲ್ಗೊಳ್ಳಲಿದ್ದಾರೆ‌. ಬೇರೆ ಬೇರೆ ಧರ್ಮದವರು ಅವರವರ ಟ್ಯಾಬ್ಲೊಗಳನ್ನು ಮೆರವಣಿಗೆಯಲ್ಲಿ ತರಲಿದ್ದಾರೆ.

ಮಂಗಳೂರು ದಸರಾದಲ್ಲಿ ಪ್ರತೀ ವರ್ಷ ಒಂದೊಂದು ವಿಶೇಷವಿರುತ್ತದೆ. ಈ ಬಾರಿ ಅಕ್ಟೋಬರ್ 15ರಂದು ರಾತ್ರಿ 8ಗಂಟೆಗೆ ಶ್ರಿಕ್ಷೇತ್ರದಿಂದ ಮಂಗಳೂರು ದಸರಾ ಮ್ಯಾರಥಾನ್ ನಡೆಯಲಿದೆ. ಜ್ಯೂಯೀಸ್ ಫಿಟ್ ನೆಸ್ ಕ್ಲಬ್ ಹಾಗೂ ಶ್ರೀಕ್ಷೇತ್ರ ಜೊತೆಯಾಗಿ ಸೇರಿ ಈ ಮ್ಯಾರಥಾನ್ ನಡೆಸಲಿದೆ. ಸಾವಿರಾರು ಮಂದಿ ಈ ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ದೈವಗಳ ಅವಹೇಳನ ವಿರುದ್ದ ಈ ಬಾರಿಯ ಮಂಗಳೂರು ದಸರಾ ಹೊಸ ಸಂದೇಶ ಸಾರಿದೆ. ದೇವಸ್ಥಾನದ ಆಡಳಿತ ಮಂಡಳಿಯ ಈ ನಡೆ ಭಾರೀ ಪ್ರಸಂಶೆಗೆ ಕಾರಣವಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section