ಬೆಂಗಳೂರು ಕಂಬಳ: ಮುಖ್ಯಮಂತ್ರಿಗೆ ಆಹ್ವಾನ

0
128

ಬೆಂಗಳೂರು : ಗುರುವಾರ ಕಂಬಳ ಸಮಿತಿ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ನೇತೃತ್ವದ ಕಂಬಳ ಸಮಿತಿಯಿಂದ ಅರಮನೆ ಮೈದಾನದಲ್ಲಿ ನವೆಂಬರ್‌ 25 ಮತ್ತು 26ರಂದು ನಡೆಯಲಿರುವ ಕಂಬಳ ಕೂಟಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದರು.

ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ದೇಶ, ವಿದೇಶಗಳಿಂದಲೂ ಭಾಗವಹಿಸುವ ಕಾರಣ ಬೆಂಗಳೂರು ಟ್ರಾಫಿಕ್‌ ಸಮಸ್ಯೆಯ ಬಗ್ಗೆ ಸಿಎಂಗೆ ವಿವರಿಸಿ ವಿವಿಧ ಇಲಾಖೆಗಳ ಸಹಕಾರ ಕೋರಲಾಯಿತು.

ಮೊಟ್ಟ ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ನಡೆಯುವ ಕಂಬಳಕ್ಕೆ ಸುಮಾರು 7 ಕೋಟಿ ರೂ. ಅಧಿಕ ಖರ್ಚು ತಗಲಲಿದ್ದು ಸರಕಾರ ಕಂಬಳಕ್ಕೆ 2 ಕೋಟಿ ರೂ. ಅನುದಾನ ನೀಡುವಂತೆ ಸಿಎಂಗೆ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿಯಾಗಿ ಸಹಕಾರವನ್ನು ಕೋರಿದರು.

ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುರುಕಿರಣ, ಪ್ರಮುಖರಾದ ಗುಣರಂಜನ್‌, ಗುಣರಾಜ್‌ ಶೆಟ್ಟಿ, ಸುಂದರ ರಾಜ್‌, ಮುರಳೀಧರ್‌ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here