ಪುತ್ತೂರು: ಮಹಿಳೆಯ ನಗ್ನ ಚಿತ್ರ ಸೆರೆಹಿಡಿದು ಹಣಕ್ಕಾಗಿ ಬ್ಯ್ಲಾಕ್ ಮೇಲ್ -ಗ್ರಾ.ಪಂ ಮಾಜಿ ಸದಸ್ಯ ಅರೆಸ್ಟ್

By: Ommnews

Date:

Share post:

ಪುತ್ತೂರು,ಸೆ 29 : ವಿವಾಹಿತ ಮಹಿಳೆಗೆ ಅರ್ಕೆಸ್ಟ್ರಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಲೈಂಗಿಕವಾಗಿ ಬಳಸಿಕೊಂಡು, ಆಕೆಯ ನಗ್ನ ಚಿತ್ರ ಸೆರೆಹಿಡಿದು ಲಕ್ಷಾಂತರ ರೂ. ಹಣ ನೀಡುವಂತೆ ಬ್ಯ್ಲಾಕ್ ಮೇಲ್ ಮಾಡಿದ ಯುವಕನ ವಿರುದ್ದ ಕಾರವಾರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

Advertisement
Advertisement
Advertisement

ಆರೋಪಿಯನ್ನು ದ.ಕ. ಜಿಲ್ಲೆಯ ಸುಬ್ರಮಣ್ಯ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯ, ಪುತ್ತೂರಿನ ಆರ್ಲಪದವು ಮೂಲದ ನಿವಾಸಿ ಪ್ರಶಾಂತ ಭಟ್ ಮಾಣಿಲ (೩೫) ಎಂದು ಗುರುತಿಸಲಾಗಿದೆ.

ಸಂತ್ರಸ್ತ ಮಹಿಳೆಗೆ ಸಂಗೀತದಲ್ಲಿ ಆಸಕ್ತಿ ಇದ್ದು ಕ್ಲಬ್ ಹೌಸ್ ಆ್ಯಪ್‌ನಲ್ಲಿ ಹೆಚ್ಚಾಗಿ ಹಾಡು ಕೇಳುತ್ತಿದ್ದಳು. 2020 ರಲ್ಲಿ ಆ್ಯಪ್ ಮೂಲಕವೇ ಆರೋಪಿಯ ಪರಿಚಯವಾಗಿದೆ. ಪರಿಚಯ ಸ್ನೇಹಕ್ಕೆ ತಿರುಗಿ ಆರ್ಕೆಸ್ಟ್ರಾದಲ್ಲಿ ಹಾಡಲು ಅವಕಾಶ ಕೊಡಿಸುವುದಾಗಿ ಹೇಳಿ ಆಸೆ ಹುಟ್ಟಿಸಿದ್ದು, ೨ ವರ್ಷಗಳ ಕಾಲ ಇವರು ಪೋನ್ ಹಾಗೂ ಪೇಸ್ ಬುಕ್ ಮೂಲಕ ಸಂಪರ್ಕದಲ್ಲಿದ್ದರು.

2023ರ ಜನವರಿ ತಿಂಗಳಲ್ಲಿ ಆರೋಪಿಯು ಮಹಿಳೆಯನ್ನು ಶಿರಸಿ ದೇವಾಲಯದಲ್ಲಿ ಭೇಟಿಯಾಗಿ ಅಲ್ಲಿಂದ ಖಾಸಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈ ವೇಳೆ ಆರೋಪಿಯು ಮಹಿಳೆಯೊಂದಿಗಿರುವ ಖಾಸಗಿ ಕ್ಷಣಗಳ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಜತೆಗೆ ವಿಡಿಯೋ ಕಾಲ್ ಮಾಡಿ ಅಲ್ಲಿಯೂ ನಗ್ನ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ ಎಂದು ದೂರಲಾಗಿದೆ.

ಇದಾದ ಬಳಿಕ ಆರೋಪಿಯು ಮಹಿಳೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಮಹಿಳೆಯು ಬೆದರಿಕೆ ಹೆದರಿ 25 ಸಾವಿರ ಹಣ ನೀಡಿದ್ದಾಳೆ. ನಂತರ ಆರೋಪಿಯೂ ಸಂತ್ರಸ್ತ ಮಹಿಳೆಯ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವುದಾಗಿ ಬೆದರಿಕೆ ನೀಡಿ ಏಳು ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾನೆ. ಅಲ್ಲದೇ ತಾಯಿ ಹಾಗು ಸ್ನೇಹಿತರಿಗೂ ಖಾಸಗಿ ಕ್ಷಣಗಳ ಚಿತ್ರಗಳನ್ನು ಕಳುಹಿಸಿದ್ದು, ಮತ್ತೆ ಹಣಕ್ಕಾಗಿ ಬ್ಯ್ಲಾಕ್ ಮೇಲ್ ಮಾಡುತ್ತಿರುವ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಕಾರವಾರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section