ಬೆಂಗಳೂರು: ಭಾರತೀಯ ನೌಕಾಪಡೆಯು ಸೆಯ್ಲರ್ಸ್ ಕ್ರೀಡಾ ಕೋಟಾದಡಿಯಲ್ಲಿ ಪೆಟ್ಟಿ ಆಫೀಸರ್, ಚೀಫ್ ಪೆಟ್ಟಿ ಆಫೀಸರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ ಎಸ್ಎಸ್ಎಲ್ಸಿ/ಪಿಯುಸಿ ಹಾಗೂ ಕ್ರೀಡಾ ಸಾಧನೆ ಮಾಡಿರುವ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು.
17.5-25 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, 14,600ರೂ. ಸ್ಟೈಪೆಂಡ್ ನಿಗದಿಪಡಿಸಲಾಗಿದೆ. ಪ್ರದೇಶದ ಆಧಾರದ ಮೇಲೆ ಸೆ.25/ಅ.01 ಅರ್ಜಿ ಸಲ್ಲಿಕೆಗೆ ಕೊನೇ ದಿನವಾಗಿದೆ.
The Secretary, Indian Navy Sports Control Board, 7th Floor, Chankya Bhavan, Integrated Headquarters, Mod (Navy), New Delhi – 110 021ಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗೆ joinindiannavy.gov.in ಅರ್ಜಿ ಪರಿಶೀಲಿಸಬಹುದು.