ರಾಷ್ಟ್ರೀಯ ಪ್ರಶಸ್ತಿ ಸೇರಿ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕೆಎಸ್​ಆರ್​ಟಿಸಿ

By: Ommnews

Date:

Share post:

ಮುಂಬೈ, ಸೆ.16: ಕಾಮಕಾಜಿ ಬಿ 2 ಬಿ ಮೀಡಿಯಾದ 15 ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಡಿ ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ಕೆಎಸ್​ಆರ್​ಟಿಸಿಗೆ ಎರಡು ಪ್ರಶಸ್ತಿ ಸೇರಿದಂತೆ ಒಟ್ಟು ನಾಲ್ಕು ಪ್ರಶಸ್ತಿಗಳು ಲಭಿಸಿವೆ. ಎರಡು ಪ್ರಶಸ್ತಿಗಳನ್ನು ಮುಂಬೈನಲ್ಲಿ ಹಾಗೂ ಮತ್ತೆರಡು ಪ್ರಶಸ್ತಿಗಳನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

Advertisement
Advertisement
Advertisement

ಕಾಮಕಾಜಿ ಬಿ 2 ಬಿ ಮೀಡಿಯಾದ 15 ನೇ ಆವೃತ್ತಿಯ ಎಕ್ಸಪ್ರೆಸ್ ಲಾಜಿಸ್ಟಿಕ್ ಹಾಗೂ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿಯಡಿ ಅತ್ಯುತ್ತಮ ಉದ್ಯೋಗದಾತ ಹಾಗೂ ಅತ್ಯುತ್ತಮ ಸುರಕ್ಷಾ ಉಪಕ್ರಮ ಅನುಷ್ಠಾನ ವರ್ಗಗಳಲ್ಲಿ ನಿಗಮಕ್ಕೆ ಎರಡು ಪ್ರಶಸ್ತಿಗಳು ಲಭಿಸಿದೆ. ಮುಂಬಯಿಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬ್ಲೂ ಯಾಂಡರ್ ವ್ಯವಸ್ಥಾಪಕ ನಿರ್ದೇಶಕ ವಿನೋಕ್‌, ಉಪಾಧ್ಯಕ್ಷ ಉಮೇಶ್ ಗೌರ್, ಬ್ಲೂ ಯಾಂಡರ್ ನಿರ್ದಶಕಿ ಶ್ರೀಮತಿ ಅನುರಾಧ ಅವರು ಪ್ರಶಸ್ತಿಯನ್ನು ನಿಗಮದ ಅಧಿಕಾರಿಗಳಾದ ಬಿ.ಎಸ್. ಶಿವಕುಮಾರಯ್ಯ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಹಾಗೂ ಪ್ರಸನ್ನ ಕುಮಾರ್ ಎಂ. ಬಾಳನಾಯಕ್, ಮುಖ್ಯ ಕಾನೂನು ಅಧಿಕಾರಿ ಅವರಿಗೆ ಪ್ರದಾನ ಮಾಡಿದರು.

ಕೆಎಸ್​ಆರ್​ಟಿಸಿಗೆ ರಾಷ್ಟ್ರೀಯ ಪ್ರಶಸ್ತಿ

ವಿಶ್ವ ತಯಾರಿಕೆದಾರರ ಕಾಂಗ್ರೆಸ್​ನಿಂದ ಕೊಡಮಾಡಲ್ಪಡುವ 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಪ್ರಶಸ್ತಿ ನಿಗಮಕ್ಕೆ ಅಂತರನಗರ ಎಲೆಕ್ಟ್ರಿಕ್ ಬಸ್ ಉಪಕ್ರಮಕ್ಕಾಗಿ ಲಭಿಸಿದೆ.

ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಅಡ್ವಾಂಟೇಜ್ ಕ್ಲಬ್ ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಸ್ಮಿತಿ ಭಟ್ ದಿಯೋರ ಮತ್ತು ಗುರ್ಗಾಂವ್ ಅವರು 10ನೇ ಆವೃತ್ತಿಯ ರಾಷ್ಟ್ರೀಯ ನಾಯಕತ್ವ ಹಾಗೂ ವಿದ್ಯುತ್ ವಾಹನಗಳ ಉಪಕ್ರಮಗಳ ಉತ್ತಮ ವರ್ಷದ ಅಂತರನಗರ ಎಲೆಕ್ಟ್ರಿಕ್ ಬಸ್ – EV Power Plus ಬಸ್​ಗೆ ಪ್ರಶಸ್ತಿ ಪ್ರದಾನ ಮಾಡಿದರು.

ನಿಗಮದ ಅಧಿಕಾರಿಗಳಾದ ಎನ್.ಕೆ. ಬಸವರಾಜು, ಮುಖ್ಯ ತಾಂತ್ರಿಕ ಶಿಲ್ಪಿ, ಜಿ. ಅಂತೋಣಿ ಜಾರ್ಜ್, ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯ) ಹಾಗೂ ಶಿವಕುಮಾರ್, ಮುಖ್ಯ ಕಾಮಗಾರಿ ಅಭಿಯಂತರರು ಜಂಟಿಯಾಗಿ ಪ್ರಶಸ್ತಿಯನ್ನು ನಿಗಮದ ಪರವಾಗಿ ಸ್ವೀಕರಿಸಿದರು.

ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಅನುಷ್ಠಾನ ಪ್ರಶಸ್ತಿ

ಏಷ್ಯಾ ಫೆಸಿಫಿಕ್ ಮಾನವ ಸಂಪನ್ಮೂಲ ಕಾಂಗ್ರೆಸ್​ನಿಂದ ಕೊಡಮಾಡಲ್ಪಡುವ ಸ್ಥಾಪಿಸಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮ ಅನುಷ್ಠಾನ ಪ್ರಶಸ್ತಿಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಲಭಿಸಿದೆ.

ಬೆಂಗಳೂರಿನ ತಾಜ್ ಹೋಟೆಲ್​ನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಓಡಿಶಾ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ನಿರ್ದೇಶಕರು ಹಾಗೂ ಹೆಚ್ಚುವರಿ ಕಾರ್ಯದರ್ಶಿ ಡಾ. ಪಾರ್ಥ ಸಾರಧಿ ಮಿಶ್ರ ಅವರು ಏಷ್ಯಾದ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳನ್ನು ಅನುಷ್ಠಾನಗೊಳಿಸಿದ ಉನ್ನತ ಸಂಸ್ಥೆಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ನಿಗಮದ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎನ್. ಲಿಂಗರಾಜು, ಉಗ್ರಾಣ ಮತ್ತು ಖರೀದಿ ನಿಯಂತ್ರಣಾಧಿಕಾರಿ ಶಿವಾನಂದ ಕವಳಿಕಾಯಿ, ಮತ್ತು ಮುಖ್ಯ ಸಂಚಾರ ವ್ಯವಸ್ಥಾಪಕರು (ವಾಣಿಜ್ಯ) ಎಸ್. ರಾಜೇಶ್ ಅವರು ಪ್ರಶಸ್ತಿ ಸ್ವೀಕರಿಸಿದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section