‘800’ ಸಿನಿಮಾ ರಿಲೀಸ್ ದಿನಾಂಕ ಘೋಷಣೆ; ಅಕ್ಟೋಬರ್ 6ಕ್ಕೆ ಮುತ್ತಯ್ಯ ಬಯೋಪಿಕ್

By: Ommnews

Date:

Share post:

ವಿಶ್ವ ಕಂಡ ಅಪ್ರತಿಮ ಸ್ಪಿನ್ನರ್​ಗಳಲ್ಲಿ ​ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರು. ಶ್ರೀಲಂಕಾ ಪರ ಆಡಿದ್ದ ಅವರು, ಹಲವು ಸಾಧನೆ ಮಾಡಿದ್ದಾರೆ. ಅವರು ಬೌಲಿಂಗ್​ಗೆ ಇಳಿದರೆ ಎದುರಾಳಿಗಳು ನಡುಗುತ್ತಿದ್ದರು. ಅವರ ಕುರಿತು ಈಗ ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಈ ಚಿತ್ರಕ್ಕೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಸಿನಿಮಾ ಅಕ್ಟೋಬರ್ 6ರಂದು ರಿಲೀಸ್ ಆಗಲಿದೆ. ಈ ಕುರಿತು ತಂಡ ಮಾಹಿತಿ ನೀಡಿದೆ.

Advertisement
Advertisement
Advertisement

ಮುತ್ತಯ್ಯ ಮುರಳೀಧರನ್​ ಅವರು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಕ್ರಿಕೆಟರ್ ಆಗಬೇಕು ಎನ್ನುವ ಕನಸು ಕಂಡರು. ಒಳ್ಳೆಯ ಸ್ಪಿನ್ ಬೌಲರ್ ಆದರು. ಅವರು ವೃತ್ತಿ ಜೀವನದಲ್ಲಿ 800 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ಏಕೈಕ ಬೌಲರ್ ಎನ್ನುವ ಖ್ಯಾತಿ ಮುತ್ತಯ್ಯ ಮುರಳೀಧರನ್​ಗೆ ಇದೆ. ಈ ಕಾರಣದಿಂದ ಅವರ ಬಯೋಪಿಕ್​ಗೆ ‘800’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ರಿಲೀಸ್ ದಿನಾಂಕ ತಿಳಿದು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಮುತ್ತಯ್ಯ ಮುರಳೀಧರನ್ ಅವರ ಕ್ರಿಕೆಟ್ ಬದುಕು ಹಲವು ರೋಚಕ ಅಂಶಗಳಿಂದ ಕೂಡಿದೆ. ಸಾಕಷ್ಟು ವಿವಾದಗಳನ್ನು ಅವರು ಮಾಡಿಕೊಂಡಿದ್ದಾರೆ. ಅವುಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಶ್ರೀಲಂಕಾ ತಂಡ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ತೆರಳಿತ್ತು. ಈ ವೇಳೆ ಗುಂಡಿನ ದಾಳಿ ಆಗಿತ್ತು. ಈ ದಾಳಿಯ ಸಂದರ್ಭದಲ್ಲಿ ಮುತ್ತಯ್ಯ ಕೂಡ ದಾಳಿಗೆ ಒಳಗಾದ ಬಸ್​ನಲ್ಲಿ ಇದ್ದರು. ಇದನ್ನೂ ಬಯೋಪಿಕ್​ನಲ್ಲಿ ಸೇರಿಸಲಾಗಿದೆ. ಅವರ ವೈಯಕ್ತಿಕ ವಿಚಾರಗಳು ಈ ಚಿತ್ರದಲ್ಲಿವೆ.

‘800’ ಚಿತ್ರಕ್ಕೆ ಎಂ.ಎಸ್​. ಶ್ರೀಪತಿ ನಿರ್ದೇಶನದಲ್ಲಿ ಮಾಡಿದ್ದಾರೆ. ಗಿಬ್ರಾನ್​ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಸ್ಲಂ ಡಾಗ್​​ ಮಿಲಿಯನೇರ್​’ ಸಿನಿಮಾದಲ್ಲಿ ನಟಿಸಿದ್ದ ಮಧುರ್​ ಮಿತ್ತಲ್​ ‘800’ ಚಿತ್ರದಲ್ಲಿ ಮುಖ್ಯಭೂಮಿಕೆ ಮಾಡಿದ್ದಾರೆ. ಮುತ್ತಯ್ಯ ಅವರ ಪತ್ನಿಯ ಪಾತ್ರಕ್ಕೆ ಮಹಿಮಾ ನಂಬಿಯಾರ್​ ನಟಿಸಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್​ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಅಕ್ಟೋಬರ್​ 6ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಸಚಿನ್​ ತೆಂಡೂಲ್ಕರ್​ ಈ ಸಿನಿಮಾದ ಟ್ರೇಲರ್​ ರಿಲೀಸ್ ಮಾಡಿದ್ದರು.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section