ರಾಜ್ಯ-ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ: ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ

By: Ommnews

Date:

Share post:

ಹುಬ್ಬಳ್ಳಿ: ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಭವಿಷ್ಯವಾಣಿ ನುಡಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಅಸ್ಥಿರತೆ ಉಂಟಾಗಲಿದೆ ಎಂದು ಹುಬ್ಬಳ್ಳಿಯಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದ್ದಾರೆ. ರಾಷ್ಟ್ರ ರಾಜಕಾರಣ‌, ರಾಜ್ಯ ರಾಜಕಾರಣದಲ್ಲೂ ಅಸ್ಥಿರತೆ ಉಂಟಾಗಲಿದ್ದು, ಯುಗಾದಿ ನಂತರ ಏನಾಗುತ್ತೇ ಎಂದು‌ ಕಾದು‌ನೋಡಿ ಎಂದು ಹೇಳಿದ್ದಾರೆ. ಈ ಹಿಂದೆಯು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿರುವ ಭವಿಷ್ಯವಾಣಿಗಳು ನಿಜವಾಗಿದೆ ಎಂಬುದಕ್ಕೆ ಅನೇಕ ಘಟನೆಗಳೇ ಸಾಕ್ಷಿಯಾಗಿದೆ. ಇದೀಗ ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ಮಹತ್ವ ಬೆಳವಣಿಗಳು ಕಾಣಲಿದೆ ಎಂದು ಹೇಳಿದ್ದಾರೆ.

Advertisement
Advertisement
Advertisement

ಯುಗಾದಿವರೆಗೂ ಸಮಯ ಇದೆ. ನಂತರ ರಾಜಕೀಯ ಅಸ್ಥಿರತೆ ಉಂಟಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಬರಗಾಲದ ಛಾಯೆ ವಿಚಾರದ ಬಗ್ಗೆಯು ತಿಳಿಸಿದ್ದು, ಮನುಷ್ಯ ಮಾಡಿದ ತಪ್ಪುಗಳನ್ನು ದೇವರು ಕ್ಷಮಿಸುತ್ತಾನೆ. ಆದರೆ ಮನುಷ್ಯ ಮಾಡಿದ ಪಾಪ‌ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಮನುಷ್ಯನ‌ ಪಾಪಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣ. ಮನುಷ್ಯನ‌ ಕರ್ಮ ಭಾದೆಗಳು ಹೆಚ್ಚಾದಾಗ ಇಂತಹ ದುಸ್ಥಿತಿಗಳನ್ನು ಸಾಮೂಹಿಕವಾಗಿ ಅನುಭವಿಸಬೇಕಾಗುತ್ತದೆ. ಶ್ರಾವಣ ಮಾಸದ ಮಧ್ಯಭಾಗದಲ್ಲಿ ಮಳೆಯಾಗಿದೆ. ಅಮಾವಾಸ್ಯೆ ಕಳೆದ ನಂತರ ಇನ್ನೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಸ್ವಾಮೀಜಿ, ಅದು ಅವರವರ ವಿಚಾರ, ಅದರ ಬಗ್ಗೆ ಹೇಳಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ತಮಿಳುನಾಡಿನ ಸಚಿವ ಉದಯ್​​ ಸ್ಟಾಲಿನ್ ನೀಡಿದ ಸನಾತನ ಧರ್ಮದ ವಿಚಾರಕ್ಕೆ ಉತ್ತರಿಸಿದ ಅವರು ಇದು ಅವರವರ ಧರ್ಮದವರ ಹೇಳಿಕೆ. ಅದು ಅವರ‌ ನೋವಿನ ಸಂಗತಿ, ಎಲ್ಲಾ ಜನಾಂಗದಲ್ಲಿಯೂ ಅವರವರ ನೋವು ಇರುತ್ತದೆ. ಅದನ್ನು ಈ ರೀತಿ ನೋವಿನ‌ ಮೂಲಕ ಹೊರಹಾಕುತ್ತಾರೆ. ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ಅವರು ಈ ವಿಚಾರವನ್ನು ಯಾವ ನೋವಿನಿಂದ ಹೇಳಿದ್ದಾರೋ ಗೊತ್ತಿಲ್ಲ. ಆಯಾ ಧರ್ಮದಲ್ಲಿರೋರು ತಮಗಾಗಿರೋ‌ ನೋವಿನಿಂದಾಗಿ ಈ ರೀತಿ‌ ಹೇಳಿಕೆ ನೀಡುತ್ತಾರೆ. ಜನರಲ್ಲಿ ಪೂರ್ಣವಾದ ಜ್ಞಾನದ‌ ಕೊರತೆ ಇದೆ. ಪೂರ್ಣವಾದ ಅರಿವಿನ ಕೊರತೆಯಿಂದಾಗಿ ಈ ರೀತಿ ಧರ್ಮ, ರಾಜಕೀಯ ವಿಚಾರ ಮುನ್ನೆಲೆಗೆ ತರುತ್ತಾರೆ. ಧರ್ಮ‌ ಎಂದರೆ ನೆಮ್ಮದಿ,‌ಶಾಂತಿ ನಿಜವಾದ ಜ್ಞಾನ ಮೂಡಿಸುತ್ತದೆ. ಆದರೆ ಅದರಲ್ಲಿ ನೆಮ್ಮದಿ, ಶಾಂತಿ ಕಂಡುಕೊಳ್ಳದವರಿಂದ‌ ಈ ರೀತಿ ಅಸಮಾಧಾನ‌ ಮೂಡುತ್ತದೆ ಎಂದು ಹೇಳಿದ್ದಾರೆ.

Share post:

LEAVE A REPLY

Please enter your comment!
Please enter your name here

ದೇಣಿಗೆ

Add an Introductory Description to make your audience curious by simply setting an Excerpt on this section