ಇಲೈಟ್ ಕ್ಲಬ್ ನಿಂದ ಶಿಕ್ಷಕ ದಿನಾಚರಣೆ.:
ಪುತ್ತೂರು; ರೋಟರಿ ಪುತ್ತೂರು ಇಲೈಟ್ ಇದರ ಆಶ್ರಯದಲ್ಲಿ ಸುದಾನ ಎಡ್ವರ್ಡ್ ಹಾಲಿನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ಮತ್ತು ಸಲ್ಲಿಸಿದ ಸಂಸ್ಥೆಯ ಇಪ್ಪತ್ತು ಶಿಕ್ಷಕ ಶಿಕ್ಷಕಿಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕರು ಹಾಗೂ ಎಲೈಟ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷರು ಆದ ರೂ. ರೆ. ವಿಜಯ ಹಾರ್ವಿನ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸ “ಇಂದಿನ ಹೊಸ ಪೀಳಿಗೆಯ ಮುಂದುವರೆದ ಶಿಕ್ಷಣ ನೀತಿ ಸ್ವಾಗತಾರ್ಹ ಆ ನಿಟ್ಟಿನಲ್ಲಿ ವಿದ್ಯಾಭ್ಯಾಸ ನೀಡಿದಾಗ ಹೊಸ ಪರಿವರ್ತನೆಯನ್ನು ಕಾಣಲು ಸಾಧ್ಯಎಂದು ಸನ್ಮಾನಿತರಿಗೆ ಶುಭಾಶಯ ಅರ್ಪಿಸಿದರು.
ಮುಖ್ಯ ಅತಿಥಿ ಜಿಲ್ಲಾ ಲಿಟ್ರಸಿ ವೈಸ್ ಚೆರ್ಮನ್ ರೊ.ವಿನಯಕುಮಾರ್ ರವರು ಮಾತನಾಡಿ ರೊಟರಿ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಹಲವಾರು ಕೊಡುಗೆಗಳನ್ನು ನಿರಂತರವಾಗಿ ನೀಡುತ್ತಾ ಇದೆ.ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದರ ಬಗ್ಗೆ ಸಮಾಜಕ್ಕೆ ತಿಳಿಸಬೇಕಾದ ಅನಿವಾರ್ಯತೆ ಇದೆ ಎಂದು ಸನ್ಮಾನಿತ ಶಿಕ್ಷಕರಿಗೆ ಶುಭ ಹಾರೈಸಿದರು.
ರೋ. ಪೀಟರ್ ವಿಲ್ಸನ್ ಪ್ರಭಾಕರ್ ಸಂದರ್ಭೋಚಿತವಾಗಿ ಮಾತನಾಡಿದರು.ರೊ.ರಝಾಕ್ ಕಬಕಕಾರ್ಸ್ ರವರು ಅಧ್ಯಕ್ಷೀಯ ಬಾಷಣ ಮಾಡಿದರು. ರೊ.ಗೋಪಾಕೃಷ್ಣ ಎಂ.ರವರು ಪ್ರಾರ್ಥಿಸಿದರು.ಕಾರ್ಯದರ್ಶಿ ರೊ.ಆಸ್ಕರ್ ಆನಂದ್ ವರದಿ ವಾಚಿಸಿದರು.ರೊ.ರಾಮ ವಂದಿಸಿದರು.ಪತ್ರಕರ್ತ ರೊ.ಮೌನೇಶ್ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು.